ಮಕ್ಕಳ ಗೀತೆ -56

 


ಆಟ ಆಡೋಣ

ಕಂದ ನಿನ್ನ ನೋಡಲು ಕಣ್ಣು ಸಾಲದು 

ನೀನು ಹೆಜ್ಜೆ ಇಡಲು ನಕ್ಷತ್ರ ನಗುವುದು

ಪಿಳಿ ಪಿಳಿ ಕಣ್ಣನ್ನು ಬಿಟ್ಟು ನೀನು ನೋಡಿದೆ 

ನಿನ್ನ ಮೊಗವ ನೋಡಿ ಚಂದಿರ ಕರೆದಿದೆ 


ನೀನು ಕಣ್ಣೀರಿಡಲು ಮಳೆಯೂ ಬಂದಿದೆ 

ನೀನು ಸ್ನಾನ ಮಾಡಲು ಜರಿಯು ಹರಿದಿದೆ 

ನೀನು ಬಟ್ಟೆ ತೊಡಲು ಹತ್ತಿ ಬಟ್ಟೆಯಾಗಿದೆ 

ನೀನು ಹಾಲನ್ನು ಕುಡಿಯಲು ಹಸುವು ಹಾಲು ಕೊಟ್ಟಿದೆ



ನೀನು ಹೆಜ್ಜೆ ಇಡಲು ಗೆಜ್ಜೆಯು ಸದ್ದು ಕುಣಿದಿದೆ 

ನೀನು ಆಟ ಆಡಲು ನೀಲಿ ಬಾನು ಕರೆದಿದೆ 

ನೀನು ನಗುಲು ಸೂರ್ಯ ಬೆಳಕನು ನೀಡಿದೆ

ನೀನು ಬಂದು ಮಲಗಲು ತೊಟ್ಟಿಲು ತೂಗಿದೆ 


ಬಾರೆ ಕಂದ ನಾವು ದೇವರ ಪೂಜೆ ಮಾಡೋಣ 

ಹೂವು ಹಾರ ಹಾಕಿ ದೇವರಿಗೆ ನಮಿಸೋಣ 

ಕರ್ಪೂರ ದೀಪ ಹಚ್ಚಿ ಮಂಗಳಾರತಿ ಮಾಡೋಣ 

ಸಾಮ್ರಾಣಿ ಹಚ್ಚಿ ಧೂಪವಾ ಬೆಳಗೋಣ 


ಕಂದ ನಿನ್ನ ನೋಡಲು ಕಣ್ಣು ಸಾಲದು 

ನೀನು ಹೆಜ್ಜೆ ಇಡಲು ನಕ್ಷತ್ರ ನಗುವುದು

ಪಿಳಿ ಪಿಳಿ ಕಣ್ಣನ್ನು ಬಿಟ್ಟು ನೀನು ನೋಡಿದೆ 

ನಿನ್ನ ಮೊಗವ ನೋಡಿ ಚಂದಿರ ಕರೆದಿದೆ 


**********ರಚನೆ**********

 ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ