ಮಕ್ಕಳ ಗೀತೆ -55

 


ಪುಟ್ಟ ಪುಟ್ಟ ಹೆಜ್ಜೆ 

ಆಡುತ, ಕುಣಿಯುತ, ನಲಿಯುತ,

 ಜಿಗಿಯುತ, ಬಂದಳು ಕಂದಮ್ಮ

ಜಾತ್ರೆಯಲ್ಲಿ ತಂದ ಕುರ್ಚಿಯ 

ನೋಡಿ ನೆಗೆದು ಕೂತಳು ಚಿನ್ನಮ್ಮ 


ಅ, ಆ,  ಇ, ಈ, ಹೇಳು ಎಂದರೆ 

ಅಳುತ ಕೂತಳು ಮುದ್ದಮ್ಮ 

ಅಮ್ಮನು ಕೊಟ್ಟ ಬಾಳೆಹಣ್ಣು  ತಿಂದು 

ಬಾಗಿಲಲ್ಲಿ ಸಿಪ್ಪೆ ಎಸೆದಳು ಪೆದ್ದಮ್ಮ 


ಪುಟ್ಟ ಪುಟ್ಟ ಸಣ್ಣ ಹೆಜ್ಜೆ ಇಟ್ಟು 

ಕಾಲಲ್ಲಿ ಗೆಜ್ಜೆ ತೊಟ್ಟು ನಲಿದಿಹಳು

ತ. ಕ.ದಿ. ಮಿ. ತೋಮ್. ತೋಮ್ 

ಎಂದು ಭರತನಾಟ್ಯವ ಆಡಿಹಳು


ಸ. ರಿ. ಗ. ಮ. ಪ.ದ. ನಿ. ಸ ಎಂದು 

ವೀಣೆಯನ್ನು ನುಡಿಸಿಹಳು 

ಹೇಳುವೆನು ನಾ ಹಾಡನ್ನು ಎಂದು 

ಭಾವಗೀತೆ ಹಾಡಿದಳು


ಮುದ್ದು ಮುದ್ದಾಗಿ ಕನ್ನಡ ಭಾಷೆ 

ಖುಷಿಯಲ್ಲಿ ಮಾತನಾಡಿಹಳು

ಪೆದ್ದು ಪೆದ್ದಾಗಿ ಸಮಾಜ ಜ್ಞಾನ 

ಓದದೆ  ತಿಳಿದಿಹಳು


ಆಡುತ ಕುಣಿಯುತ ನಲಿಯುತ

 ಜಿಗಿಯುತ ಬಂದಳು ಕಂದಮ್ಮ

ಜಾತ್ರೆಯಲ್ಲಿ ತಂದ ಕುರ್ಚಿಯ ನೋಡಿ 

ನೆಗೆದು ಕೂತಳು ಚಿನ್ನಮ್ಮ 


**********ರಚನೆ********* 

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಪ್ರೇಮೋತ್ಸವ- ಭಾವಗೀತೆ ಸಂಕಲನ