ಮಕ್ಕಳ ಗೀತೆ -51
*ನಮ್ಮ ಮುದ್ದಿನ ಪುಟ್ಟಿ*
ನಮ್ಮ ಮನೆಯಲ್ಲಿ ಅಮ್ಮ
ಮುಂಜಾನೆ ಎದ್ದಿತ್ತು
ಪುಟ್ಟಿಯನ್ನು ಎಬ್ಬಿಸಿ
ಹಲ್ಲುಜ್ಜಲು ಹೇಳಿತ್ತು
ಎದ್ದು ಹಲ್ಲು ಉಜ್ಜಿದ ಪುಟ್ಟಿಗೆ
ಕಾಫಿ ಬ್ರೆಡ್ ಕೊಟ್ಟಿತ್ತು
ಪುಟ್ಟಿಗೆ ಅಮ್ಮನ ಶಾಲೆಗೆ
ರೆಡಿ ಆಗಲು ಹೇಳಿತ್ತು
ಊಟದ ಬಾಕ್ಸು ಪುಸ್ತಕದ
ಬ್ಯಾಗು ಹೆಗಲಿಗೆ ಹಾಕಿತ್ತು
ಬ್ಯಾಗು ಹಿಡಿದ ಪುಟ್ಟಿಯು
ಶಾಲೆಯ ಬಸ್ಸನು ಏರಿತ್ತು
ಟೀಚರ್ ಶಾಲೆಯಲ್ಲಿ ಪುಟ್ಟಿಗೆ
ಪಾಠ ಮಾಡಿತ್ತು
ಪಾಠವ ಮುಗಿಸಿ ಪುಟ್ಟಿ
ಮನೆಗೆ ಬಂದಿತ್ತು
ಮನೆಗೆ ಬಂದ ಪುಟ್ಟಿಗೆ ಅಮ್ಮ
ಊಟಕ್ಕೆ ಕರೆದಿತ್ತು
ಹೊಲೆಯ ಅಂಚಿನ ಮೇಲೆ
ಕೆಂಪನೆ ಕಾವಲಿ ಕಾದಿತ್ತು
ಹಿಟ್ಟನ್ನು ಮಿದ್ದು ರೊಟ್ಟಿಯ
ತಟ್ಟಿ ಬೇಯಿಸಿತ್ತು
ಬಿಸಿ ಬಿಸಿ ರೊಟ್ಟಿಗೆ ಚಟ್ನಿ,
ಬೆಣ್ಣೆಯ ಸವರಿತ್ತು
ಇದನ್ನು ನೋಡಿದ ಪುಟ್ಟಿಗೆ
ಬಾಯಲ್ಲಿ ನೀರು ಬಂದಿತ್ತು
ರೊಟ್ಟಿ ತಿಂದ ಪುಟ್ಟಿಗೆ
ತುಂಬಾ ಖುಷಿಯಾಗಿತ್ತು
ಪುಟ್ಟಿಯು ಶಾಲೆಯಲ್ಲಿ ಹೇಳಿದ
ಹೋಂವರ್ಕ್ ಮುಗಿಸೀತ್ತು
ಅಮ್ಮ ಕರೆದು ಪುಟ್ಟಿಯ ತೊಡೆಯ
ಮೇಲೆ ಮಲಗಿಸಿ ಕೊಂಡಿತ್ತು
ಪುಟ್ಟಿಗೆ ಅಮ್ಮರಾಮಾಯಣದ
ಕಥೆಯ ಹೇಳಿತ್ತು
ಇದನ್ನು ಕೇಳುತ್ತ ನಮ್ಮ
ಪುಟ್ಟಿಯು ನಿದ್ದೆಗೆ ಜಾರಿತ್ತು
**********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
.jpeg)
Chandru 👍
ReplyDelete