ಮಕ್ಕಳ ಗೀತೆ -40
ರಾಜರು ಬಂದರು
ನಮ್ಮನು ಆಳಲು ರಾಜರು ಬಂದರು
ಗುಡ್ಡದ ಗುಹೆಯ ನುಸುಳಿ ಬಂದರು
ಕತ್ತಿ ಗುರಾಣಿ ಹಿಡಿದು ತೋರುತ ನಿಂತರು
ಬಂದರು ನಮ್ಮನು ಆಳಲು ರಾಜರು ಬಂದರು
ಚಳಿಯಲ್ಲಿ ಕಂಬಳಿ ಒದ್ದು ನಿಂತರು
ನಿದ್ದೆ ಇಲ್ಲದೆ ಸೊರಗಿ ಸೋತರು
ಸುದ್ದಿ ತಿಳಿಯಿತು ಪಕ್ಕದ ರಾಜ್ಯಕ್ಕೆ
ರಾಜ್ಯದ ಸೈನಿಕರು ನೆಗೆದು ನಡೆದರು
ಗಡ್ಡವ್ವ ಬಿಟ್ಟು ಗುಡ್ಡವ ನೋಡಿ
ಮರದ ಕೊಂಬೆಯ ಜಿಗಿದು ಆಡಿ
ಗಿಡ್ಡನೆ ಚಡ್ಡಿಯ ತಂದಿಹೆ ಬಾರೋ
ಮೇಳದ ಕುಣಿತ ನೋಡುವ ಬಾರೋ
ಕಳ್ಳ ಮಳ್ಳ ಸುಳ್ಳರ ತೆಗೆದುಹಾಕು
ಧೈರ್ಯದಿ ನಿಂತು ಗುಟುರು ಹಾಕು
ಗಂಡೆದೆ ಬಂಟನ ನಿನ್ನಲ್ಲಿ ತೋರು
ಶಿಳ್ಳೆಯ ಹಾಕುತ ಸೈನಿಕರು ನಡಿಗೆ ಜೋರು
**********ರಚನೆ**********
ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ
ಬಹಳ ಅಂದವಾದ ಗೀತೆ👌🙏
ReplyDeleteNice
ReplyDelete