ಹೃದಯ ದೀಪ

 



ದೇಹವೆಂಬ ಗಾಜಿನ ಮನೆಯಲಿ 

ಗಾಳಿ ಎಂಬ ಉಸಿರು ಹರಿದು 

ರಕ್ತ ಎಂಬ ದೀಪದ ಎಣ್ಣೆ ಉರಿದು 

ಹೃದಯ ದೀಪ ಬೆಳಗಿ ಬಿಟ್ಟಿತು 


ದೇಹ ಕಲ್ಮಶಗಳ ಹೊರಗೆ ಹಾಕಿ 

ಶುದ್ಧಗೊಳಲು ನಮ್ಮ ಬಾಳು ಬೆಳಗಿತು 

ಕಾಲು ಎಂಬ ಚಕ್ರ ಹರಿದು 

ನಮ್ಮ ದೇಹ ಮುಂದೆ ಚಲಿಸಿತು 


ಕಣ್ಣು ಎಂಬ ಕ್ಯಾಮರದಲ್ಲಿ ಎಲ್ಲಾ 

ಚಿತ್ರಗಳು ಮೆದುಳಿನಲ್ಲಿ ಬರೆಯಿತು 

ಮೆದುಳು ಎಂಬ ಕಂಪ್ಯೂಟರ್ 

ನಮ್ಮ ದಾರಿ ಮುಂದೆ ನಡೆಸಿತು 


ಆರದಿರಲಿ ಹೃದಯ ದೀಪ 

ಬಾಳು ಬೆಳಗುತಿರಲಿ ಜೀವದ ಹಣತೆ 

ನಡೆದು ಸಾಗಲಿ ಬದುಕ ಪಯಣ 

ಒತ್ತು ಬಾರವ ದೂರ ತೀರಕೆ 


**********ರಚನೆ********* 

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments