ಮಕ್ಕಳ ಗೀತೆ -23

 



🌹ಯಾರ ಕಾಟ ಹೇಳಮ್ಮ🌹 

ಅಮ್ಮ ಅಮ್ಮ ಅಮ್ಮ ಅಮ್ಮ ನನ್ನಮ್ಮ 

ಹರಿವ ನೀರಿಗೆ ಯಾರ ಕಾಟ ಹೇಳಮ್ಮ 

ಸಿಹಿ ಕಬ್ಬಿನ ಹಾಲಿಗೆ ನೊಣಗಳ ಕಾಟ ಸಾಕಮ್ಮ 

ಹೂವಿನ ಮಕರಂದಕೆ ದುಂಬಿಯ ಕಾಟ ಏನಮ್ಮ 


ಉಕ್ಕುವ ಕೆಂಪು ಲಾವಾ ರಸವನ್ನು

ತಡೆಯುವವರು ಯಾರು ಹೇಳಮ್ಮ 

ಹರಿವ ರಕ್ತವು ಹೃದಯದಿ ನಿಂತರೆ 

ಅದುವೇ ನಮ್ಮಯ ಸಾವಮ್ಮ 


ರಬಸದಿ ಹರಿವ ನದಿಗೆ ಎದುರು 

ಈಜಿದರೆ ಬಿಡುವುದೇನೆಮ್ಮ 

ಮೋಡಗಳು ಗುದ್ದಿ ಸಿಡಿಲು ಬಡಿದು 

ಭೂಮಿಗೆ ಮಳೆ ಹನಿ  ತಡೆಯುವರು ಯಾರಮ್ಮ 


ಬಿಸಿಲು ಮಳೆ ಸುರಿದು ಮೋಡದಿ ಕಾಮನಬಿಲ್ಲು

 ಮೂಡಿದರೆ ಭೂಮಿಗೆ ತಂಪು ಏನಮ್ಮ 

ಭೂಮಿಯು ಕಂಪಿಸಿ  ಬಿರಿದರೆ 

ಜೀವಿಗಳ ಉಳಿಸುವರು ಯಾರಮ್ಮ 


***********ರಚನೆ********* 

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa