ಮಕ್ಕಳ ಗೀತೆ -22
🌹ಕಪ್ಪು ಕೆಂಪು ಇರುವೆ 🌹
ಇರುವೆ ಇರುವೆ ಇರುವೆ
ಎಲ್ಲಿಗೆ ಹೋಗುತ್ತಿರುವೆ
ಸಾಲು ಸಾಲು ಕಟ್ಟಿ
ಒಗ್ಗಟ್ಟನ್ನು ಸಾರುತ್ತಿರುವೆ
ಬಣ್ಣ ಬಣ್ಣದ ಕಪ್ಪು
ಕೆಂಪನೆ ಇರುವೆ
ಮನೆಯಲ್ಲಿ ಗೋಡೆಗೆ ಬಳಿದ
ಬಣ್ಣವ ತಿನ್ನುತ್ತಿರುವೆ
ಸಿಹಿ ಸಕ್ಕರೆ ಕಂಡರೆ
ಅಕ್ಕರೆಯಿಂದ ಬರುವೆ
ಸಾಲು ಸಾಲಲ್ಲಿ ಹೊತ್ತು
ಎಲ್ಲರಿಗೂ ಹಂಚುತ್ತಿರುವೆ
ನಿನಗೆ ಸಾವಿನ ಭಯ
ಕಾಣುವುದೇ ಇಲ್ಲವೇ
ವಿಷವ ಇಟ್ಟು ಮಾನವರು
ನಿನ್ನ ಕೊಲ್ಲುತಿಹರಲ್ಲವೇ
ನಿನ್ನ ತೂಕವ ನೋಡಿ
ಕಟ್ಟಿ ಗೊದ್ದ ಎನ್ನುತಿಹರು
ದಪ್ಪಗೆ ಕೆಂಪಗೆ ಇದ್ದರೆ
ಕೇಂಜಿಗೆ ಎನ್ನುತಿಹರು
ಭಕ್ತರು ನಿನಗೆ ಅಕ್ಕಿ
ಕಾಳು ಹಾಕಿ ಸಾಕುತಿಹರು
ನೀನು ತಿಂದರೆ ಅದುವೇ
ಪುಣ್ಯ ಎನ್ನುತಿಹರು
ನಿಮ್ಮಯ ಸಾಲು ದೇಶ
ಕಾಯುವ ಸೈನಿಕನಂತೆ
ಯುದ್ಧಕ್ಕೆ ಹೊರಟ
ದಾರಿ ಕಾಣದ ನಾವಿಕನಂತೆ
ದಿನವೂ ದುಡಿಮೆ
ನಿಮ್ಮ ಉಸಿರು
ಇರುವೆ ಎಂದು ತಾನೆ
ನಿಮ್ಮಯ ಹೆಸರು
***********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment