ಮಕ್ಕಳ ಗೀತೆ -21

 




🌹ತೋಳ ಮತ್ತು ನರಿ 🌹

ನಮ್ಮ ಊರಿನ ಏರಿಯ 

ಮೇಲೆ ಬೆಟ್ಟ ಹೊಂದಿತ್ತು 

ಬೆಟ್ಟ ಗುಡ್ಡದ ತಪ್ಪಲ್ಲಿನಲ್ಲಿ 

ನರಿ ಮತ್ತು ತೋಳ ವಾಸ ಮಾಡಿತ್ತು 


ಊರಿನ ಹೊಲದಲ್ಲಿ ನರಿಯು 

ಸುತ್ತಾಡಿಕೊಂಡಿತ್ತು

ಒಂದು ದಿನ ತೋಳವು 

ಊಟಕ್ಕೆ ನರಿಯ ಕರೆದಿತ್ತು 


ತೋಳವ ನೋಡಿದ ನರಿಗೆ 

ಜೀವ ಭಯವು ತುಂಬಿತ್ತು 

ತೋಳ ನನ್ನ ಕೊಲ್ಲುವನೆಂದು 

ನರಿಗೆ ಚೆನ್ನಾಗಿ ತಿಳಿದಿತ್ತು 


ತೋಳದಿಂದ ತಪ್ಪಿಸಿಕೊಳ್ಳಲು

 ನರಿ ಉಪಾಯ ಮಾಡಿತ್ತು 

ಅಲ್ಲೇ ಮೇಯುವ ಕುರಿಗಳ 

ಹಿಂಡು ನೋಡಿ ತೋಳವ ಕರೆದಿತ್ತು 


ತೋಳವು ನರಿಯಾ ನೋಡಲು 

ಹೊಲಕ್ಕೆ ಬಂದಿತ್ತು 

ನರಿಯು ಕುರಿಗಳ ಹಿಂಡಿನ 

ನಡುವೆ ನಿಂತಿತ್ತು 


ತೋಳವು ಕುರಿಗಳ ನೋಡಿ 

ನರಿಯ ಮರೆತಿತ್ತು 

ತೋಳವು ಸುತ್ತಲೂ ನೋಡಲು

ನರಿಯು ಕಾಣದಾಗಿತ್ತು 


ತೋಳವು ಕುರಿಯ ಮರಿಯ 

ಹೊತ್ತುಕೊಂಡು ಓಡಿತ್ತು 

ಇದನ್ನು ನೋಡಿದ ನರಿಗೆ 

ಜೀವ ಉಳಿತೆಂದು ಖುಷಿಪಟ್ಟಿತ್ತು 


ಕುರುಬನು ಬಂದು ಹಿಂಡಿನ 

ಕುರಿಯ ಎಣಿಸಿತ್ತು 

ಒಂದು ಕುರಿ ಕಡಿಮೆ ಇದೆ 

ಎಂದು ಅವನಿಗೆ ತಿಳಿದಿತ್ತು 


ಕುರಿ ಹುಡುಕುತ್ತಾ ಹೋರಟ ಕುರುಬನಿಗೆ

 ತೋಳ ತಿಂದ ಕುರಿ ಸಿಕ್ಕಿತ್ತು 

ಅದನ್ನು ನೋಡಿದ ಕುರುಬನಿಗೆ 

ಕಣ್ಣೀರು ಸುರಿದಿತ್ತು 


ಚಾಲಾಕಿ ನರಿಯು ತೋಳದಿಂದ 

ಜೀವ ತಪ್ಪಿಸಿಕೊಂಡಿತ್ತು 

ನಾನು ಗೆದ್ದೆ ಎಂದು ನರಿಯು 

ಖುಷಿಯಲ್ಲಿ ಓಡಿತ್ತು 


********ರಚನೆ******

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಹೆತ್ತು ಹೊತ್ತ ತಾಯಿ

ಸಂತೋಷವಾಗಿರಲು ಪ್ರಯತ್ನಿಸೋಣ