ಮಕ್ಕಳ ಗೀತೆ - 20

 



🌹ಮಂಗನ ಆಟ 🌹

ಪ್ರವಾಸಕ್ಕೆಂದು

ಮಕ್ಕಳು ಕಾಡಿಗೆ ಬಂದಿತ್ತು 

ಕಾಡಿನಲ್ಲಿ  ದೇವರ

 ಗುಡಿ ಒಂದು ಇತ್ತು 


ಮಕ್ಕಳು ಹೋಗುವ 

ರಸ್ತೆ ಬದಿಯಲ್ಲಿ 

ಮಂಗಗಳ ಹಿಂಡು 

ಗುಂಪು ಕಟ್ಟಿ ಕುಣಿದಿತ್ತು 


ದೇವರು ನೋಡಲು  

ಮಕ್ಕಳು ಪೂಜೆಗೆ ಬಂದಿತ್ತು 

ಬ್ಯಾಗಲ್ಲಿ ಹಣ್ಣು ಕಾಯಿ 

ಇರುವುದು ಮಂಗಗಳು ನೋಡಿತ್ತು 


ಮಂಗ  ಚಂಗನೆ ಜಿಗಿಯಿತು 

ಮಕ್ಕಳ ಬ್ಯಾಗನ್ನು ಕಿತ್ತಿತ್ತು 

ಹಿಡಿದು ಕಸಿದು 

ಬಾಳೆಹಣ್ಣನ್ನು ತಿಂದಿತ್ತು 


ಮಂಗಗಳ ಹಿಂಡು

ಮಕ್ಕಳ ಕಂಡು 

ದುರುಗುಟ್ಟಿ ನೋಡಿ 

ಕಣ್ಣನ್ನು ಬಿಟ್ಟಿತು 


ಹಣ್ಣು ತಿಂದ ಬ್ಯಾಗನ್ನು 

ತೆಗೆದುಕೊಳ್ಳಲು ಹೋದರೆ 

ಮುಸು ಮುಸು ಎಂದು 

ಗದರಿತ್ತು


ಮಂಗಗಳ ಆಟಕ್ಕೆ 

ದೇವಸ್ಥಾನಕ್ಕೆ ಪೂಜೆಗೆ 

ಬರುವ ಭಕ್ತರುಗಳಲಿ

ಭಯವು ಮನೆ ಮಾಡಿತು


********ರಚನೆ*********

 ಡಾ.ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments