ಮಕ್ಕಳ ಗೀತೆ -19

 



🌹ಅಂಚೆ ಪೆಟ್ಟಿಗೆ🌹

ಸೈಕಲ್ ಹೋಯಿತು 

ಬೈಕು ಬಂದಿತು 

ನಮ್ಮ ಅಂಚೆಯ 

ಅಣ್ಣ ಬೈಕಲ್ಲಿ ಬಂದಿಹನು


ಮನೆಯ ಬಾಗಿಲ ತಟ್ಟಿ 

ಬೆಲ್ಲನು ಒತ್ತಿ 

ಅಂಚೆ ಬಂದಿದೆ 

ಎಂದು ಕೂಗಿ ಕರೆದಿಹನು


ಖಾಕಿ ಪ್ಯಾಂಟ್, ಶರ್ಟ್ 

ಕೊರಳಿನ ಚೀಲವು, 

ಇಲ್ಲದೆ ಅಂಚೆ ಕೊಡುತಿಹನು 


ಅಂಚೆಯ ಹಾಕಲು 

ಊರಲ್ಲಿ 

ಅಂಚೆ ಪೆಟ್ಟಿಗೆ 

ಕಾಣೆಯಾಗಿದೆ 


ಅಂಚೆ ಕಾಗದ  

ಬರೆಯುವುದು 

ಕಡಿಮೆ ಆಗಿದೆ 


ಊರ ಮಕ್ಕಳಿಗೆ 

ಅಂಚೆ ಅಣ್ಣನ 

ನೆನಪು ಹೋಗಿದೆ 


ಅಂಚೆ ಅಣ್ಣ ಬಂದಿಹನು 

ಚಿಣ್ಣರ ಅಂಚೆ ಅಣ್ಣ 

ಬಂದಿಹನು


**********ರಚನೆ********

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple