ಮಕ್ಕಳ ಗೀತೆ -18

 



🌹ನಮ್ಮ ಅಕ್ಕ 🌹

ಎಲ್ಲರಂತಲ್ಲ ನಮ್ಮ ಅಕ್ಕ 

ಇವಳು ಬಾರಿ ಬಲು ಪಕ್ಕ

ಇಟ್ಟರೆ ಇವಳು ಆ ಲೆಕ್ಕ 

ಮುಗಿಯಿತು ಅಲ್ಲಿಗೆ ರೊಕ್ಕ 


ಕೂಡಲು ಬಾರದ ಜಾಣೆ 

ಕಳೆಯಲು ಹೊರಟಳು ನಾಕಾಣೆ 

ಗುಣಿಸಲು ಇವಳಿಗೆ ಬರೋಕ್ಕಿಲ್ಲ 

ಭಾಗಿಸುವುದು ಇವಳಿಗೆ ಗೊತ್ತಿಲ್ಲ 


ಸವೆಸಿದಳು ಜೀವನದ ದಾರಿ 

ಧೈರ್ಯದಿ ಮುನ್ನುಗ್ಗುವ ನಾರಿ 

ಜಗಳಕ್ಕೆ ನಿಂತರೆ ಹೆಮ್ಮಾರಿ 

ನೋಡಲು ತುಂಬಾ ವೈಯಾರಿ 


ಅಡುಗೆ ಮನೆಯ ಇವಳ ಆಸ್ತಿ 

ಸಿಟ್ಟು ತುಂಬಾ ಬಲು ಜಾಸ್ತಿ 

ಶಿಸ್ತಲಿ ಆಹಾರ ಮಾಡಿಹಳು 

ಎಲ್ಲರ ಹೃದಯ ಗೆದ್ದಿಹಳು 


ಎಲ್ಲರಂತಲ್ಲ ನಮ್ಮ ಅಕ್ಕ 

ಇವಳು ಬಾರಿ ಬಲು ಪಕ್ಕ

ಇಟ್ಟರೆ ಇವಳು ಆ ಲೆಕ್ಕ 

ಮುಗಿಯಿತು ಅಲ್ಲಿಗೆ ರೊಕ್ಕ 


*********ರಚನೆ ********

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple