ಮಕ್ಕಳ ಗೀತೆ -17

 




🌹ಹುತ್ತದ ಹಾವೊಂದು 🌹

ಊರಿನ ಹೊರಗೆ ನಮ್ಮ 

ತೋಟ ಒಂದಿತ್ತು 

ತೋಟದ ಬದಿಯ ಮೇಲೆ 

ಹುತ್ತವು ಬೆಳದಿತ್ತು 


ಹುತ್ತದ ಒಳಗೆ ಗೆದ್ದಲು 

ಮನೆಯ ಮಾಡಿತ್ತು 

ಇದನ್ನು ನೋಡಿದ ಹಾವೊಂದು 

ಹುತ್ತದ ಒಳಗೆ ನುಗ್ಗಿತ್ತು 


ಬಿಸಿಲಾ ಬೇಗೆಯ ತಡೆಯಲಾಗದೆ 

ಹಾವು ಹೊರಗೆ ಬಂದಿತ್ತು 

ಹಾವನ್ನು ನೋಡಿದ ಅಮ್ಮ 

ಕೈಯ ಮುಗಿದಿತ್ತು 


ಮರದ ಮೇಲಿನ ಮಟ್ಟೆಯೊಂದು

ಹಾವಿನ ಮೇಲೆ ಬಿದ್ದಿತ್ತು 

ರೊಚ್ಚಿಗೆದ್ದ ಹಾವು ಸಿಟ್ಟಲ್ಲಿ 

ಎಡೆಯ ಎತ್ತಿತ್ತು 


ನೋಡಲು ಬುಸು ಬುಸು 

ಸದ್ದು ಮಾಡಿತ್ತು

ಮಚ್ಚರೆ ಇಟ್ಟಿದೆ ಹಾವು 

ಎಂದು ಅಮ್ಮ ಹೆದರಿತ್ತು 


ಪುಂಗಿ ಊದಲು ಹಾವು 

ತಲೆಯ ತೂಗಿತ್ತು 

ಹಾವನ್ನು ಹಿಡಿದ ಹಾವಾಡಿಗ

ಕಾಡಿಗೆ ಬಿಟ್ಟಿತ್ತು 


ಅಮ್ಮ ಕುಕ್ಕೆ ಸುಬ್ರಹ್ಮಣ್ಯಕ್ಕೆ ನೂರು ರೂ

ಮನಿ ಆರ್ಡರ್ ಮಾಡಿತ್ತು

ಮತ್ತೆ ಬರದಿರು ಹಾವೇ ಎಂದು 

ಪೂಜೆ ಮಾಡಿತ್ತು 


**********ರಚನೆ *********

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa