ಮಕ್ಕಳ ಗೀತೆ-16

 



🌹ಅಜ್ಜನ ಕುದುರೆ 🌹

ನಮ್ಮ ಊರಲ್ಲಿ ಅಜ್ಜನು

ಸಾಕಿದ ಕುದುರೆ ಒಂದಿತ್ತು 

ಬಯಲು ನೆಲದಲ್ಲಿ ಹಸಿರು 

ಉಲ್ಲನು ಮೇಯುತ್ತಲಿತ್ತು 


ಮೇಯುತ್ತ ಕುದುರೆ ಏಕೋ 

 ಕುಂಟುತ ಸಾಗಿತ್ತು

ಕಾಲಿನ ಗೊರಸಲ್ಲಿ ಕಲ್ಲೊಂದು 

ಗಾಯವ ಮಾಡಿತ್ತು 


ಸೊಟ್ಟಗೆ ಕುಂಟುವ ಕುದುರೆಯ 

ನೋಡಿದ ನಮ್ಮಜ್ಜ 

ಔಷಧಿ ತಂದು ಕಾಲಿನಾ 

ಗೋರಸಿಗೆ ಹಚ್ಚಿದ ಅಜ್ಜ 


ಅಜ್ಜನು ಅತ್ತಿದ ಕುದುರೆ 

ಲಗಾಮು ಬಿಗಿ ಹಿಡಿದು 

ಓಡಿತು ಕುದುರೆ ನೀರಿನಂತೆ 

ಚಂಗನೆ ಮೇಲ್ನಗೆದು


ನಮ್ಮ ಊರಲ್ಲಿ ಅಜ್ಜನು

ಸಾಕಿದ ಕುದುರೆ ಒಂದಿತ್ತು 

ಅಜ್ಜನು ಹಾಕಿದ ಹುರುಳಿ 

ಬೀಜವ ದಿನವೂ ತಿನ್ನುತ್ತಲಿತ್ತು 


***********ರಚನೆ*********

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Post a Comment