ಮಕ್ಕಳ ಗೀತೆ -14

 



🌹ಶಾಲೆಗೆ ಬನ್ನಿ 🌹

ಭೂಮಿಗೆ ನಾವು 

ಬಂದಾಯ್ತು 

ದೇವರು ವರವ 

ಕೊಟ್ಟಾಯ್ತು 


ಬನ್ನಿ ಗೆಳೆಯರೇ 

ಶಾಲೆಗೆ ಹೋಗೋಣ 

ಕನ್ನಡ ಭಾಷೆಯನ್ನು

ಕಲಿಯೋಣ


ಅಕ್ಷರ ಕಲಿತರೆ 

ಬಾಳು ಬೆಳಕು 

ಸಾಕ್ಷರ ಆಗದೆ ಹೋದರೆ

ಜೀವನ ಹುಳುಕು 


ಗುರು ಹಿರಿಯರು 

ನಮ್ಮಯ ದೇವರು 

ಅಕ್ಷರವೇ ನಮ್ಮಯ 

ಮುಂದಿನ ಗುರು 


ಒಳ್ಳೆಯ ನಡೆಯನು 

ಕಲಿಯೋಣ 

ಜಾಣರು ನಾವು ಎಂದು 

ಸಾರಿ ಹೇಳೋಣ 


ಶಿಕ್ಷಣ ನಮ್ಮ ಬೆನ್ನೆಲುಬು 

ಅಕ್ಷರ ನಮ್ಮ ಪಕ್ಕೆಲುಬು 

ದೇಶದ ಹಣತೆ ಬೆಳಗೋಣ 

ಜ್ಞಾನದ ಬೆಳಕ ಚೆಲ್ಲೋಣ 


*********ರಚನೆ *******

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಪ್ರೇಮೋತ್ಸವ- ಭಾವಗೀತೆ ಸಂಕಲನ

ಸಂತೋಷವಾಗಿರಲು ಪ್ರಯತ್ನಿಸೋಣವೇ- ವ್ಯಕ್ತಿತ್ವ ವಿಕಸನ

Author biography of Chandrashekhar Channapura Halappa