ಮಕ್ಕಳ ಗೀತೆ -13

 




🌹ಆಕಾಶದಿ ಚಂದಿರ 🌹

ರಾತ್ರಿಯ ವೇಳೆಯಲ್ಲಿ ಆಕಾಶದಿ 

ಚಂದಿರ ಮೂಡಿಹನು 

ನಕ್ಷತ್ರಗಳ ಬಾನಿನಲ್ಲಿ 

ಹೊಳೆಯುತ್ತ ಕಂಡಿಹನು 


ನಾನು ಓಡಲು ಅವನು 

ಮುಂದೆ ಓಡಿಹನು 

ನೀರಿನ ಗುಂಡಿಯಲ್ಲಿ 

ಸುಂದರವಾಗಿ ಕಂಡೀಹನು 


ಯಾಕೋ ಏನೋ ಒಮ್ಮೊಮ್ಮೆ 

ಚಂದಿರ ತುಂಡಾಗಿ ಕಂಡಿಹನು 

ಯಾರೋ ದ್ವೇಷದಿ ಅವನ

ಕಡಿದು ಕೊಂದಿಹರು 


ಪೂರ್ಣ ಚಂದಿರ ಆಗಸದಿ

ಶುಂಠಿ ಪೇಪರ್ ಮೆಂಟ್ ಅಂತೆ ಕಂಡಿಹನು 

ಕೈಯಾಚಾಚಿದರೇ ನಾನು 

ಸಿಗದೇ ದೂರದಿ ನಗುತಿಹನು 



**********ರಚನೆ *********

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa