ಮಕ್ಕಳ ಗೀತೆ -12

 




ಮುದ್ದಿನ ಬೆಕ್ಕು 

ನಮ್ಮ ಮನೆಯಲ್ಲಿ 

ಅಮ್ಮ ಬೆಕ್ಕು ಸಾಕಿತ್ತು 

ಬೆಕ್ಕು ನೋಡಲು 

ಹುಲಿಯಾ ರೀತಿ ಕಂಡಿತ್ತು 


ಬೆಕ್ಕಿಗೆ ಹಸಿವು ಆಗಿ 

ಮಿಯಾವ್ ಮಿಯಾವ್ ಎಂದಿತ್ತು 

ಹಿಡಿಯಲು ಹೋದರೆ ಅದನ್ನು 

ನೆಗೆದು ಬರುತ್ತಿತ್ತು 


ಹಾಲಿನ ಬಟ್ಟಲ ತುಂಬ 

ನೊರೆ ಹಾಲು ತುಂಬಿತ್ತು 

ಹಾಲನ್ನು ಕುಡಿದ ಬೆಕ್ಕು 

ಕುಣಿದು ಆಡಿತ್ತು 


ಮನೆಯಲ್ಲಿ ಒಂದು ಇಲಿಯು 

ಓಡಾಡಿ ಕೊಂಡಿತ್ತು

ದವಸಾ ಧಾನ್ಯ ತುಂಬಿದ 

ಕೋಣೆಯಲ್ಲಿ ಇರುತ್ತಿತ್ತು


ಇಲಿಯು ಬಂದು ದವಸದ 

ಧಾನ್ಯ ಬಗೆದಿತ್ತು 

ಬೆಕ್ಕಿನ ಕಣ್ಣು ಕಪ್ಪು ಇಲಿಯಾ 

ಮೇಲೆ ಬಿದ್ದಿತ್ತು 


ಬೆಕ್ಕು ಇಲಿಯನು ಮುಂದೆ 

ಹೋಗಲು ಬಿಟ್ಟು 

ಅದರ ಬಾಲ ಹಿಡಿದು 

ಆಟವಾ ಆಡಿತ್ತು 


ಬೆಕ್ಕಿಗೆ ಚೆಲ್ಲಾಟ ಇಲಿಗೆ .

ಪ್ರಾಣ ಸಂಕಟ ಕಾದಿತ್ತು 

ಇಲಿಯ ತಿಂದ ಬೆಕ್ಕು 

ಬಂದು ಪಕ್ಕದಿ ಮಲಗಿತ್ತು 


**********ರಚನೆ ********

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Post a Comment

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple