ದಾಸಗ್ರಿವ
ಬರೆಯದೇ ಕರಗಿದ ಕಥೆಗೆ
ಆಯುಧ ಪೂಜೆಯ ನೆನಪು
ರಾಮನು ಪಟ್ಟ ವ್ಯಥೆಯ
ಕಾಡಿದೆ ಕಾಡಿನ ನೆನಪು
ಸೀತೆಯ ಕನಸಿಗೆ ರಾವಣ
ಅದನೆ ಸುಮ್ಮನೇ ಬಿರುಕು
ಆಯುಧ ಪೂಜೆಯ ದಿನವೂ
ಸುಡುವರು ರಾವಣನ ತಲೆಯ
ನರ ರಾಕ್ಷಸರು ಇಲ್ಲಿ ಹಾಕಿಹರು
ಸುಂದರ ಪ್ರೀತಿಯು ಬಲೆಯ
ದಿನವೂ ನಡೆವ ರಾಮಾಯಣ
ಕೇಳುವರು ಯಾರು ಇಲ್ಲಿ
ಸುಡುವ ಪ್ರೀತಿಯ ಬೆಂಕಿಯ ಬಲೆಗೆ
ಸುಟ್ಟಿಹರು ಅಮಾಯಕರು ತಮ್ಮ ಉಸಿರನು ಚೆಲ್ಲಿ
ಬರೆಯುವೇನೆ ನಾನು ಕಥೆಯ
ಹೇಳುವೇನೆ ಪ್ರೀತಿಯ ಒಲವ ಸಹಿಯ
*********ರಚನೆ*******
ಡಾ. ಚಂದ್ರಶೇಖರ್ ಸಿ. ಹೆಚ್
👌 super
ReplyDelete