ಚುಟುಕು ಕವನ-33
🌹ನಗು🌹
ನಗುವಿನ ಮೊಗದ ಅಪ್ಸರೆಯೆ
ನೋಟದಿ ಕಾಡಿದ ಸುಂದರಿಯೆ
ಬಿಡದೆ ಕಾಡುವ ಮೋಹಿನಿಯೇ
ಪ್ರೀತಿಯಾ ನನ್ನಾ ಕಿನ್ನರಿಯೇ
🌹 ಮುಗುಳ್ನಗೆ 🌹
ಬಾನಲ್ಲಿ ಚಂದ್ರ ಮುಗುಳ ನಗುತಿದೆ
ನಕ್ಷತ್ರಗಳು ನಾಚಿ ಮೀನುಗುತಿದೆ
ಹಾರಾಡುವ ಹಕ್ಕಿಯೊಂದು ಕೂಗಿದೆ
ಚಂದ್ರನಿಗೆ ಮುತ್ತಿಡಲೆ ನಾ ಏನುತಿದೆ
🌹 ಮಂದಹಾಸ 🌹
ಚೆಲುವೆ ನಿನ್ನ ಮೊಗದಿ ಮಂದಹಾಸ
ಕವಿಯು ಕೂಡ ಅರಿಯಾದದ ಪದದ ಪ್ರಾಸ
ನಿನ್ನ ನೋಡಿ ನಕ್ಕನಂತೆ ಕಾಳಿದಾಸ
ಆಷಾಢ ಮುಗಿದು ಬಂತಂತೆ ಶ್ರಾವಣಮಾಸ
*********ರಚನೆ********
ಡಾ. ಚಂದ್ರಶೇಖರ್ ಸಿ ಹೆಚ್
Comments
Post a Comment