ಯಾರನ್ನು ಮಾಡಲಿ ಹೊಣೆ
ಬದುಕ ಬವಣೆ ನೋವ
ಹೊತ್ತು ನಮ್ಮ ದಾರಿ ಸಾಗಿದೆ
ಮನಸ್ಸಿನೊಳಗೆ ಬಿತ್ತಿದ ಆಸೆಗಳ
ಹೊತ್ತ ಜೀವ ಏಕೋ ಅಳುತ್ತಿದೆ
ನಾನು ಯಾರನ್ನ ಮಾಡಲಿ ಹೊಣೆ
ಹಣೆ ಬರಹಕ್ಕೆ ವಿಧಿಯೆ ಹಣೆ
ಬದುಕ ಬಂಡಿ ನೂಕ ಬೇಕು
ಕಷ್ಟ ಸುಖಗಳ ಪ್ರೀತಿ ಸಾಕು
ಜಾತಿಗಳ ಬೇರಿನ ನೂಕು ನುಗ್ಗಲು
ಕಾಲವೆಂಬ ಮಾಯೆ ಮುರಿದಿದೆ ಮಗ್ಗಲು
ನಾವು ಯಾರು ಹೇಳಿ ಇಲ್ಲಿ ಕುಗ್ಗಲು
ಏಕೆ ಬೀಳಬೇಕು ಬಂಡಿ ಜಗ್ಗಲು
ಪಯಣ ಒಂದು ಅನುಭವದ ರಾಶಿ
ಗುರುವೇ ನೀನು ಸಾಗು ನೆನೆದು ಕಾಶಿ
ಕಾಣದ ದಾರಿಯಲ್ಲಿ ನಮ್ಮ ನಡುಗೆ
ಸಹಬಾಳ್ವೆ ಜೀವನದ ಸವಿ ಉಡುಗೆ
ಸಾಗಿಸೋಣ ನಮ್ಮ ಬದುಕನು
ಶಪಿಸುತ್ತಾ ಕಾಣದ ವಿಧಿಯನ್ನು
ಜೀವನದ ದಾರಿ ಮೂರು ದಿನ
ನಗುತ ಇರಲಿ ನಮ್ಮ ತನು ಮನ
**********ರಚನೆ*******
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment