ದೇವರ ನಾಡು
ದೇವರ ನಾಡಿನಲ್ಲಿ ಮನಕುಲುಕುವ ಕಥೆ
ಭೂಮಿಯೇ ಜರುಗಿದ ನೋವಿನ ವ್ಯಥೆ
ಹರಿಯಿತೆ ನೀರು ಕೊಚ್ಚಿದರೆ ಜನರು
ನೆತ್ತರು ನೋಡಿ ಜನ ಬೆಚ್ಚಿತೆ ಮನ
ಮಣ್ಣಿನಲ್ಲಿ ಮರಣಮೃದಂಗ
ಸಾವು ನೋವಿಗೆ ದೇವರೆ ದಂಗಾ
ಹರಿಯಿತು ನೆತ್ತರು ನದಿಯಂತೆ
ಸೂರುಗಳು ತೇಲಿದವು ಮರದಂತೆ
ದೇವರೆ ನಿನಗೆ ಕರುಣೆಯೇ ಇಲ್ಲವೇ
ಇಂಥ ಸಾವು ನೋವು ತರವೇ
ಊರಿಗೆ ಊರೇ ಇಲ್ಲಿ ಸ್ಮಶಾನ
ಎಲ್ಲೆಡೆಯೂ ಸೂತಕದ ಮೌನ
ಏಕಿಷ್ಟು ಕೋಪ ಈ ಪ್ರಕೃತಿಗೆ
ಮನುಷ್ಯನು ಮಾಡಿದ ವಿಕೃತಿಗೆ
ಕಟ್ಟಲೆ ಬೇಕು ಬೆಲೆ ಮಾಡಿದ ತಪ್ಪಿಗೆ
ನೀರು ಮಣ್ಣು ಸೇರಿಯೇ ನೀಡಿದ ಅಪ್ಪುಗೆ
ಎಚ್ಚರ ಎಚ್ಚರ ಮಾನವನೇ ನಿನಗೆ
ಪ್ರಕೃತಿಯ ಮಡಿಲಲ್ಲಿ ನಿನ್ನ ಸುಲಿಗೆ
ನೀನೆ ತೆರಬೇಕು ಸುಂಕವ ನಾಡಿಗೆ
ಸಾವೆ ಉತ್ತರವೂ ನಿನಗೆ ಕೊನೆಗೆ
*********ರಚನೆ***********
ಡಾ.ಚಂದ್ರಶೇಖರ್. ಸಿ. ಹೆಚ್
Comments
Post a Comment