ಚುಟುಕು ಕವನ-61
🌹 ಭ್ರಮೆ 🌹
ಭ್ರಮೆಯ ಬದುಕು ಬೇಡವೋ ಮನುಜ
ಸತ್ಯವ ಅರಿತರೆ ನಿನ್ನ ಜೀವನ ಸಹಜ
ಕಾಣದ ವಸ್ತುವಿಗೆ ಏಕೆ ಹುಡುಕಾಟ
ಸಿಕ್ಕರೂ ಎಲ್ಲಾ ತಪ್ಪದು ಮಾನವ ಪರದಾಟ
🌹 ಚುಟುಕು ಕವನ 🌹
🌹ಸತ್ಯ🌹
ಸತ್ಯ ಮತ್ತು ಅಸತ್ಯದ ನಡುವೆ ಹೋರಾಟ
ಸುಳ್ಳು ಮತ್ತು ಪೊಳ್ಳು ಭರವಸೆಯ ಕಾಟ
ಬದುಕಿನ ನಡುವೆ ಮಾಗಿದ ಜೀವನದ ಓಟ
ಯಾರೋ ಮಾಡಿಸಿದಂತೆ ಸಂಸಾರದಲ್ಲಿ ಮಾಟ
ದಿನವೂ ಗಂಡ ಗುಂಡಿಯ ಮಾರ ಮಾರಿ ಗುದ್ದಾಟ
🌹 ಸ್ವಾತಂತ್ರ 🌹
ಸಿಕ್ಕಿದೆ ನಮಗೆ ಸ್ವಾತಂತ್ರ
ಆದರೂ ಕೂಡ ಪರತಂತ್ರ
ಬದುಕು ಸುಮ್ನೆ ಅತಂತ್ರ
ಮಾಡುತವರೆ ಇಲ್ಲಿ ಕುತಂತ್ರ
*********ರಚನೆ********
ಡಾ.ಚಂದ್ರಶೇಖರ್. ಸಿ. ಹೆಚ್
Comments
Post a Comment