ಚುಟುಕು ಕವನ -59
🌹ಹಸಿರು🌹
ಹಸಿರು ನೀನು ಜೀವಗಳ ಉಸಿರು
ಹೇಗೆ ಮರೆಯಲಿ ನಾ ನಿನ್ನ ಹೆಸರು
ಹಸಿರಿಗೆ ಉಸಿರು ಕಟ್ಟಿಸೋ ಕೆಸರು
ಹಸಿರಿದ್ದರೆ ಮಾನವನ ಬದುಕು ಮೊಸರು
🌹 ಅಮೃತ 🌹
ನನ್ನಯ ಒಲವಿಗೆ ನೀನೆ ಅಮೃತ
ನಿನ್ನಯ ಹೆಸರಲಿ ನಾನು ಜೀವಂತ
ಓಡಿದೆ ಬಾಳು ಏಕೋ ದಾವಂತ
ಗೋಳಿನ ಜೀವನ ಪ್ರೀತಿಲಿ ಸುಕಾಂತ
🌹 ಶ್ರಾವಣ 🌹
ಶ್ರಾವಣ ಬಂತು ಶ್ರಾವಣ
ಎಲ್ಲೆಡೆ ಹಸಿರಿನ ತೋರಣ
ಬದುಕು ಒಂದು ಊರಣ
ದೈವವೇ ಜೀವದ ಕಾರಣ
********ರಚನೆ*******
ಡಾ.ಚಂದ್ರಶೇಖರ್ . ಸಿ.ಹೆಚ್
Comments
Post a Comment