ಚುಟುಕು ಕವನ -56
🌹ಬದುಕು🌹
ನೂರೆಂಟು ಕಥೆಯ ಈ ಬದುಕು
ನೋವು ನಲಿವುಗಳ ಒಮ್ಮೆ ಕೇದಕು
ಆಸೆಗಳ ಹುಟ್ಟನ್ನು ನೀ ಸರಿ ತದುಕು
ಜೀವನವೇ ಒಂಥರಾ ತಳುಕು ಬಳುಕು
ಯಾಕೀ ವೇದನೆ ನಮ್ಮಯ ಬಾಳಿನಲಿ
ಸಾಕಿ ರೋಧನೆ ನಮ್ಮಯ ಬದುಕಿನಲಿ
ಜೀವ ಮರಣಗಳ ನಡುವೆ ಹೋರಾಟ
ಸುಖ ದುಃಖದ ನಡುವೆ ಜಂಜಾಟ
ಆಸೆ ಆಕಾಂಕ್ಷೆಗಳ ಒಳಗೆ ಹುಡುಕಾಟ
ಏಳು ಬೀಳುಗಳ ಜೋತೆ ಒದ್ದಾಟ
ಗಂಡ ಗುಂಡಿಯರ ಒಳಗೆ ಗುದ್ದಾಟ
ಮೂರು ದಿನದ ಬಾಳಿಗಾಗಿ ರಂಪಾಟ
**********ರಚನೆ*********
ಡಾ.ಚಂದ್ರಶೇಖರ್. ಸಿ. ಹೆಚ್
Comments
Post a Comment