ಚುಟುಕು ಕವನ -55

 


        🌹ಪ್ರವಾಹ🌹

ಪ್ರವಾಹದ ಮಳೆಗೆ ಭೂಮಿಯು ತತ್ತರ

ನಡುಗಿದ ಗುಡ್ಡದ ನೋವಿನ ಬಿತ್ತರ

ಸಾವು ನೋವಿನ ಪ್ರಕೃತಿ ಉತ್ತರ

ಚೆಲ್ಲಿದೆ ಮಣ್ಣಲಿ ಮನುಜರ ನೆತ್ತರ

          🌹ನೆರೆ🌹

ಮಳೆಯ ಹನಿಗೆ ನದಿಯು ಹರಿಯಿತು

ನೆರೆಯು ಬಂದು ಬದುಕು ಮಸಣವಾಯಿತು

ಹನಿ ಹನಿ ನೀರು ಮನುಜರ ನೆತ್ತರು ಚೆಲ್ಲಿ

ಜೀವನವಾಯಿತು ಸೂರಿಲ್ಲದೆ ಬಾಳು ಚೆಲ್ಲ ಪಿಲ್ಲಿ

🌹ತಂಗಾಳಿ🌹

ಮಲ್ಲಿಗೆ ವನದಿ ಸುಗಂಧದ ತಂಗಾಳಿ

ಸುಳಿಯಿತು ಮನಕೆ ಮೋಹದ ರಸ ಗಾಳಿ

ವನದಿ ಅಪ್ಸರೆಯರ ಪ್ರೀತಿ ಹಾವಳಿ

ಮುಡಿಯಲಿ ಮಲ್ಲಿಗೆ ನಗುವು ಅರಳಿ

**********ರಚನೆ********

ಡಾ. ಚಂದ್ರಶೇಖರ್. ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35