ನೂರೆಂಟು ದಾರಿ
ಬದುಕಿನ ಬವಣೆಯಲ್ಲಿ
ಕಾಣದ ನೂರೆಂಟು ದಾರಿ
ಯಾರಿಗೆ ಕೇಳಲಿ ನಾ
ಕೈ ಮುಗಿದು ಏನೆಂದು ಸಾರಿ
ಕಾಲವು ಕೊನೆಯಾಗಿ
ನೋವುಗಳಲ್ಲಿ ಉತೋಗಿ
ಮನಸು ಮಸಣವಾಗಿ
ಯಾರಿಗೆ ಹೇಳಲಿ ಭಾವ
ಬದುಕು ಉಸಿರಿಲ್ಲದ ಜೀವ
ಎದೆಯ ತುಂಬಾ ನಿನ್ನ ಚಿತ್ರ
ರಾತ್ರಿಗಳು ಮರೆಯಾಗುವ ವಿಚಿತ್ರ
ನನಸಾಗದ ನಲ್ಮೆಯ ಕನಸ್ಸು
ಸುಡುವ ಹಸಿ ಬಿಸಿ ವಯಸ್ಸು
ಜೀವನ ಎಂಬ ಜೋಕಾಲಿ
ನಗುತಿರಬೇಕು ನಾವಿಲ್ಲಿ
ನೋವು ನಲಿವು ಮಾಮೂಲಿ
ಉಸಿರು ಹೆಸರಾಗುವ ಖಯಾಲಿ
*********ರಚನೆ***********
ಡಾ. ಚಂದ್ರಶೇಖರ್ ಸಿ. ಹೆಚ್
Comments
Post a Comment