ಮೌನದ ದಾರಿ
ಮೌನದ ದಾರಿಯಲ್ಲಿ
ನೆನಪುಗಳ ಕಲರವ
ಸಾಗಿತು ಸಮಯ
ತಿಳಿಯದೆ ನಿನ್ನೊಲವ
ಬದುಕು ಒಂದು
ಸುಂದರ ಪಯಣ
ಕಾದಿದೆ ಈ ಮನ
ಬರೆಯಲು ಸುಂದರ ಕವನ
ಕವನದ ಸಾಲುಗಳು
ಹೇಳಿದೆ ನೀನೇ ಗೆಳತಿ
ನನ್ನ ಬಾಳ ದಾರಿಯಲ್ಲಿ
ಬಣ್ಣದ ಕನಸಿನ ಒಡತಿ
ಪದಗಳಿಗೆ ಸಿಗದ
ಹಾಡು ನೀನು
ಆ ಹಾಡಿಗೆ ಕಳೆದೋದ
ಮೂಕ ಪ್ರೇಮಿ ನಾನು
ಬಾಳ ಬಂಡಿಯಲ್ಲಿ
ಬದುಕು ಸವೆದಿದೆ
ಬಣ್ಣಗಳ ನಡುವೆ
ಜೀವನ ಅರಳಿದೆ
ನೀನು ಇಲ್ಲದೆ
ಒಲವು ಎಲ್ಲಿದೆ
ನೀನೇ ಬೇಕೆಂದು
ಮನವು ಕೂಗಿದೆ
ಮೌನದ ದಾರಿಯಲ್ಲಿ
ನೆನಪುಗಳ ಕಲರವ
ಸಾಗಿತು ಸಮಯ
ತಿಳಿಯದೆ ನಿನ್ನೊಲವ
**********ರಚನೆ********
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment