ಚುಟುಕು ಕವನ-22
🌹 ಸುಮ್ಮನೆ 🌹
ಹೊಳೆವ ಕಣ್ಣು ಹಾಗೆ ಪಳ ಪಳ
ಮನದ ಆಸೆ ಏಕೋ ಜಳ ಜಳ
ಎದೆಯ ಒಳಗೇ ಸುಮ್ಮನೆ ತಳಮಳ
ಪ್ರಾಯದ ವಯಸ್ಸು ಒಂಥರಾ ಮಳ ಮಳ
🌹 ನೀನು 🌹
ಕವಿತೆ ಬರೆದರೆ ಕವಿಯೇ ನೀನು
ಬೆಳಕನು ಬಿಟ್ಟರೆ ರವಿಯೆ ನೀನು
ರವಿವರ್ಮನ ಕುಂಚದ ಅರಗಿಣಿ ಯೆ ನೀನು
ಹುಲಿಯನ್ನು ಸೀಳಿದ ಹೊಯ್ಸಳನೆ ನೀನು
🌹ಕವನ🌹
ಪದಗಳು ಮೂಡಲು ಬರುವುದೇ ಕವನ
ನೋಡಿತು ಹುಡುಗಿಯ ಏಕೋ ನಯನ
ಹಾಡಿದ ಹಾಡು ನೆನಪಿನ ಗಾಯನ
ಸೆಳೆಯಿತು ಇಂದುಬರಸೆಳೆದು ತನು ಮನ
*******ರಚನೆ*********
ಡಾ. ಚಂದ್ರಶೇಖರ್. ಸಿ. ಹೆಚ್
ನಿಮ್ಮ ಕಾವ್ಯ ಕಟ್ಟುವ ಕಲೆಗೆ ಶರಣು
ReplyDelete