ಮೇಘ ಸಂದೇಶ
ಬಾನಲಿ ಗುಡುಗಿತಿಹ ಮೋಡ
ಮಳೆಯಾ ಸುರಿಸುತ್ತಿದೆ ನೋಡ
ಹನಿ ಹನಿಯಾಗಿಮಳೆ ಜೀನುಗಿ
ಚಿಟಪಟ ತಾ ಎಂದೂ ಗುನುಗಿ
ಹನಿ ಹನಿ ಒಂದಾಗಿ ಹಳ್ಳ ಮಾಡಿ
ಕೆಂಪು ಸೀರೆ ಉಟ್ಟು ಕೆಂಪಾಗಿ
ಕೆರೆ ಕಟ್ಟೆತುಂಬಿ ಹರಿದು ನೋರೆಯಾಗಿ
ಕಾಡು ಮೇಡುಗಳಲಿ ಮಣ್ಣ ಸವೆಸಿ ನದಿಯಾಗಿ
ನದಿ ಕಡಲ ಒಡಲ ಸೇರಿ ಉಪ್ಪಾಗಿ
ಕಡಲ ನೀರು ಆವಿಯಾಗಿ ಮೋಡವಾಗಿ
ಮೊಡದಿ ಮಿಂಚೊಂದು ಸಿಡಿಲಾಗಿ
ಮೇಘದಿ ಮಳೆಯು ನಗು ಹೂವಾಗಿ
ಮೇಘದ ಸಂದೇಶ ಆಲಿಕಲ್ಲು ಮಳೆ ಸುರಿದು
ಬರದ ಭೂಮಿ ನೀರು ಗುಟು ಗುಟು ಕುಡಿದು
ಹಸಿರು ಬೆಳೆಗಳಿಗೆ ಉಸಿರು ಬಂದು
ಪ್ರಕೃತಿಯ ಸೊಬಗು ಕೂಗಲಿ ದೇವ ನಿನ್ನ ನೆನೆದು
*********ರಚನೆ***********
ಡಾ.ಚಂದ್ರಶೇಖರ್. ಸಿ.ಹೆಚ್
2ನೇ ಪ್ಯಾರ 2ನೇ ಸಾಲಿನಲ್ಲಿ
ReplyDeleteಕೆಂಪು ಸೀರೆ ಹುಟ್ಟು ಕೆಂಪಾಗಿ ಅಲ್ಲ.
ಕೆಂಪು ಸೀರೆ ಉಟ್ಟು ಕೆಂಪಾಗಿ
ಎಂದು ಆಗಬೇಕಿತ್ತು
ಉತ್ತಮ ಗೆಯತೆ ಹೊಂದಿದ ಕವಿತೆ ಗುರುಗಳೆ.
ReplyDelete