ನಾ ಬುದ್ಧನಾಗುವೆನೆ
ಬದುಕಿನ ಇಳೆಯಲ್ಲಿ
ಕಣ್ಣೀರ ಜಡಿ ಮಳೆಯಲ್ಲಿ
ಮೈಯ ತೊಳೆದರೆ
ನಾ ಬುದ್ಧನಾಗುವೆನೆ!
ಆಸೆಗಳ ಹಸಿರು ಕಾಡಿನಲ್ಲಿ
ದುಃಖದ ನದಿ ಹರಿಯದೊಡೆ
ನಾ ಬುದ್ಧನಾಗುವೆನೆ!
ಕನಸುಗಳ ಊರಿನಲ್ಲಿ
ಮನಸ್ಸುಗಳ ಮದುವೆಯಾದೊಡೆ
ನಾ ಬುದ್ಧನಾಗುವೆನೆ!
ಮರದ ತಂಪಾದ ನೆರಳಿನಲ್ಲಿ
ನಾ ಮೋಹದಿ ತಪಸ್ಸು ಮಾಡಿದೊಡೆ
ನಾ ಬುದ್ಧನಾಗುವೆನೆ!
ಅಜ್ಞಾನದ ಶಾಲೆಯಲ್ಲಿ
ದುರಾಸೆಯ ಜ್ಞಾನ ಬಂದರೆ
ನಾ ಬುದ್ಧನಾಗುವೆನೆ!
ಮನಸ್ಸು ಶಾಂತಿಯ ಬೇಡಿ
ಮನವು ಮಸಣವಾದರೆ
ನಾ ಬುದ್ಧನಾಗುವೆನೆ!
ಸಾವಿನ ಸಂತೆಯಲ್ಲಿ
ಬದುಕಿನ ಅಂತ್ಯವಾದರೆ
ನಾ ಬುದ್ಧನಾಗುವೆನೆ!
ಅಧರ್ಮದ ಮನೆಯಲ್ಲಿ
ಧರ್ಮ ಸಹಿಷ್ಣುವಾದರೆ
ನಾ ಬುದ್ಧನಾಗುವೆನೆ!
ಸರ್ವರಿಗೂ ಬುದ್ಧ ಪೂರ್ಣಿಮೆ ಶುಭಾಷಯಗಳು
*********ರಚನೆ********
ಡಾ.ಚಂದ್ರಶೇಖರ್. ಸಿ ಹೆಚ್
Comments
Post a Comment