ಚುಟುಕು ಕವನ-21
ನನ್ನದೆಯ ಅರಮನೆಗೆ ನೀ ಚಿಟ್ಟೆ
ನನ್ನ ಮುದ್ದಾದ ಕಿವಿಗೆ ಹೂವಿಟ್ಟೆ
ಕಣ್ಣ ನೋಟದಿ ನನಗೆ ಕಾವಿಟ್ಟೆ
ನಾನು ನಿನ್ನ ಹಿಂದೆ ಬಿದ್ದೂ ಕೆಟ್ಟೆ
ನಿನ್ನ ಒಂಥರಾ ಅರಳಿದ ತಾವರೆ
ಮೋಹಕ ಮೈಮಾಟ ಏಕೋ ಸಕ್ಕರೆ
ಮಲ್ಲಿಗೆ ಉದುರಿದಂಗೆ ನೀನು ನಕ್ಕರೆ
ಹಾಲೂಜೇನು ಸೇರಿದಾಗೆ ನೀನು ಸಿಕ್ಕರೆ
ನನ್ನವಳು ಒಂಥರಾ ವೆನಿಲ್ಲಾ ಐಸ್
ಮುದ್ದು ಮಾಡಿದ್ರೆ ತುಂಬಾ ನೈಸ್
ಕೆನ್ನೆ ಕರಗೂ ಆ್ಯಪಲ್ ಸ್ಲೈಸ್
ಒಟ್ಟಾರೆ ಇವಳು ಬಾಸುಮತಿ ರೈಸ್
**********ರಚನೆ *******
ಡಾ.ಚಂದ್ರಶೇಖರ್ ಸಿ. ಹೆಚ್
ಶುರುವಾಗಿದ್ದು ಕನ್ನಡದಲ್ಲಿ ಮುಗಿದದ್ದು ಇಂಗ್ಲಿಷ್ ನಲ್ಲಿ
ReplyDelete