ಚುಟುಕು ಕವನ-19
🌹ಹಣತೆ🌹
ಮನದ ಮನೆಯಲ್ಲಿ ಬೆಳಕಿಗೆ ಕೊರತೆ
ಬೆರವ ಹೃದಯದೀ ನೋವಿನ ಮೋರತೆ
ಬದುಕಿನ ಪುಟದಲ್ಲಿ ಜೀವಗಳ ಜೊತೆ ಬೆರೆತೆ
ಜೀವನದ ಕತ್ತಲ ಮನೆಯಲ್ಲಿ ದೈವವೇ ಹಣತೆ
🌹ಭಾವ🌹
ಕಣ್ಣೀರ ಕಡಲಿಗೆ ಅಲೆಗಳ ನೂರೆಂಟು ಭಾವ
ಹರಿವಾ ನದಿಗೆ ಮಳೆ ಹನಿಯೆ ಬದುಕಿನ ಜೀವ
ಸಮುದ್ರದಿ ಬೆರೆತು ಉಪ್ಪಾಗೊ ನೋವ
ಯಾರು ಕೊಡಬೇಕು ಮೋಡಕೆ ಹನಿಯಾಗಲು ಕಾವ
🌹ಇಬ್ಬನಿ🌹
ಕಣ್ಣ ಚಿಂಬಿಸಿತು ಕಂಬನಿ
ಮನದ ಮಳೆ ಹನಿ ಇಬ್ಬನಿ
ಮನವು ಕಲಕಿತು ತಬ್ಬಿ ನೀ
ವಯಸ್ಸು ಉರುಳಿತು ಇರದೇ ನೀ
ಸೊಗಸಾಗಿವೆ ಗುರುಗಳೆ
ReplyDeleteತುಂಬಾ ಸೊಗಾಗಿದೆ
ReplyDelete