ಚುಟುಕು ಕವನ -16
ಹುಡುಗನಿಗೆ ಬಂತು ಮೀಸೆ
ಮನಸ್ಸು ತುಂಬಾ ಬರಿ ಆಸೆ
ಹುಡುಗಿ ಕೊಟ್ಟಳು ಬಾಶೆ
ಕಳೆದು ಹೋದ ಇವನು ಕೂಸೆ
ಕಟ್ಟು ಮಸ್ತು ಹೈದ ಇವನು
ಕುಸ್ತಿಯಲ್ಲಿ ಪಂಟ ಇವನು
ಕಣ್ಣ ನೋಟಕೆ ಸೋತು ಇವನು
ಹೊಡಿತವನೆ ಸೈಕಲ್ ಇವನು
ನಡೆದರೆ ಭೂಮಿ ಬಿರುಕು
ಮೂತಿ ತುಂಬಾ ಸಿಡುಕು
ಮುಖದ ತುಂಬಾ ಹೊಳಪು
ಯಾರಿಗಾಗಿ ಬಿಳಿ ಬೆಳಕು
********ರಚನೆ********
ಡಾ.ಚಂದ್ರಶೇಖರ್ . ಸಿ. ಹೆಚ್
Comments
Post a Comment