ಚುಟುಕು ಕವನ -14
ಹೃದಯದಲಿ ಪ್ರೀತಿ ನದಿ ಹರಿದು
ಮನಸ್ಸಿನ ಮನೆ ಬಾಗಿಲು ತೆರೆದು
ನಾ ಬಂದು ನಿನ್ನ ಕೂಗಿ ಕರೆದು
ನೀ ಇರದೆ ಮನೆಯೇ ಬರಿದು
ಕಣ್ಣ ನೋಟ ಬಲು ಸೊಗಸು
ನಾ ಕಂಡೆ ಬರಿ ಹಗಲು ಕನಸು
ಸುಡುತಿರುವ ಬಿಸಿ ವಯಸು
ಕಾಣದಾಯಿತು ಕನಸು ನನಸು
ಒಬ್ಬಂಟಿ ನಾನು ಓ ಚೆಲುವೆ
ಕಾಡುವೆ ಏಕೆ ನನ್ನೆ ಒಲವೆ
ನೋಡು ನೀನು ಓ ಗೆಲುವೆ
ನಿನಗೇಕೆ ಮುನಿಸು ಓ ಚಲವೆ
***********ರಚನೆ********
ಡಾ.ಚಂದ್ರಶೇಖರ್. ಸಿ. ಹೆಚ್
Comments
Post a Comment