ಭಾವ ಗೀತೆ-1

 



🌹ಬಾನಲಿ ಮೋಡ 🌹


ಬಾನಲಿ ಮೋಡದ ನರ್ತನಕೆ 

ಮಳೆ ಸುರಿದಿದೆ ನೋಡ

ಇಳೆಯಲಿ ಬರಬಂದು ಬರಡು

ನೆಲ ಹೇಳಿದೆ ಹಾಡ //ಪ//


ಕುಹೂ ಕುಹೂ ಕೋಗಿಲೆ ಕೂಗಿದೆ 

ಮೆಲ್ಲುಸಿರಾ ಸವಿಗಾನ

ಮಾಮರ ಹಾಡಿದೆ  

 ಪ್ರಕೃತಿ ಜಗದಾ ಹೊಸ ತಾಣ


ಮೂಡುವ ರವಿಯ ಕಿರಣದೀ                    

  ಬೆಳಕು ಜಗಕ್ಕೆಲ್ಲ

ರಾತ್ರಿಯ ಚಂದ್ರನ ಬೆಳದಿಂಗಳ      

  ಹೊಳಪು ಭುವಿಗೆಲ್ಲ



ಸಾಗರದ ಅಲೆಯಂತೆ ಈ 

   ಸುಂದರ ಬದುಕು 

ದಡಕ್ಕಾಗಿ ಬಂತು ಈ ಬಾಳಿನ 

    ಹೊಸ ಬೆಳಕು


ಮನಮನದಲ್ಲಿ ಮೊಳಗಲಿ 

  ಜೀವಚೇತನ ಶಕ್ತಿ

ನಮ್ಮ ಉಸಿರಲಿ ಬೆರೆಯಲಿ 

     ಭಾವ ಬೆಳಗುವ ಭಕ್ತಿ 


**********ರಚನೆ*******

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35