ನೀನಿಲ್ಲದೆ ಹೃದಯ ಅಳುತಿದೆ




ಆಕಾಶದಿ ಮಿನುಗುವ ತಾರೆ

ನಿನ್ನನೇ ಹುಡುಕಿದೆ ಬಾಳಲ್ಲಿ ಬಾರೆ

ನೀನಿಲ್ಲದ ಈ ಜೀವದಿ ಹೃದಯ ಅಳುತಿದೆ


ನನ್ನ ಕಾಡಿದ ಮಾಯೆಯೇ

ಮನಸು ಬೇಡಿದ ಚಾಯೆಯೆ 

ನೀನಿಲ್ಲದ ಈ ಜೀವಕೆ ಹೃದಯ ಅಳುತಿದೆ


ನೀನಿಲ್ಲದ ಕ್ಷಣ ನನ್ನ ಕಾಡಿದೆ

ಅನುದಿನವೂ ನೀನು ಬೇಕಿದೆ

ಈ ಬದುಕಲಿ ನಿನ್ನ ಬೇಡಿದೆ

ನೀನೆ ನನ್ನ ಪ್ರೀತಿ ಎಂದಿದೆ 

ನೀನಿಲ್ಲದ ಈ ಜೀವಕೆ ಹೃದಯ ಅಳುತಿದೆ


ಈ ಮನಸ್ಸು ನಿನ್ನದೇ ಈ ಕನಸ್ಸು ನಿನ್ನದೆ

ನಾನು ನಿನ್ನವನೇ, ನಿನಗಾಗಿಯೇ ಕಾದಿರುವೆ

ನೀನಿಲ್ಲದ ಕ್ಷಣವು ನನ್ನ ಕಾಡಿದೆ 

ನೀನೆ ನನ್ನ ಬದುಕು ಎಂದಿದೆ


ಬಾನ ಹಂಚಲಿ ತೇಲಿ ನಾನು

ಹುಡುಕಿದೆ ನಿನ್ನ ಭೂಮಿ ಬಾನು

ಪ್ರತಿಕ್ಷಣವೂ ನೀನು ಬೇಕಿದೆ

ತೆಲೋಣ ನಾವು ನೀಲಿ ಬಾನಲಿ 

ನಮ್ಮ ಮಿಲನವೇ ಹಕ್ಕಿಗಳ ಚಿಲಿಪಿಲಿ

ನೀನಿಲ್ಲದ ಈ ಜೀವದಿ ಹೃದಯ ಆಳುತಿದೆ


ನೀನ ಇರುವ ಪ್ರತಿಕ್ಷಣವೂ

ಜೀವನ ನಗುತಿದೆ 

ನೀನಿಲ್ಲದೆ ಹೃದಯವು ಬಡಿತ ಮರೆತಿದೆ


ನನ್ನೇ ನಾ ಅರ್ಪಿಸುವೆ ನಿನ್ನ ಪ್ರೀತಿಗೆ

ನನ್ನೇ ನಾ ಕೊಡುವೆ ಆ ನಿನ್ನ ಬದುಕಿಗೆ

ನಾ ಬರುವೆ ನಿನ್ನ ಬಾಳಿಗೆ ತಲುಪುವ ದಾರಿ ಕಾಯದೆ

ಪ್ರತಿಕ್ಷಣವೂ ನಿನ್ನ ನೆನಪು ಕಾಡಿದೆ


ನೀನಿಲ್ಲದ ಬದುಕು ಬರಡು 

ಈ ಪ್ರೀತಿಯಲ್ಲಿ ನಾನು ಕುರುಡು 

ನೀನಿಲ್ಲದ ಈ ಜೀವದಿ ಹೃದಯ ಆಳುತಿದೆ


**********ರಚನೆ********

ಡಾ. ಚಂದ್ರಶೇಖರ್. ಸಿ. ಏಚ್ 




Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35