ಕಣ್ಣೀರ ಇಬ್ಬನಿ
ಕಣ್ಣೀರ ಹನಿಗೆ ಕಂಬನಿಯ ಮುಕ್ತಿ.
ನರನಾಡಿಗಳಲ್ಲಿ ಹರಿವ ರಕ್ತವೇ ಶಕ್ತಿ.
ವಯಸ್ಸು ಉಕ್ಕುವಾಗ ಆಸೆಗಳು ನೂರು.
ಮುದುಡಿದ ಮನಸ್ಸಿಗೆ ನೆರಿಗೆಯೆ ತೇರು.
ಯೌವ್ವನದ ಹೊಳೆಯಲ್ಲಿ ಈಜು ಸುಂದರ.
ಮುಪ್ಪಿನ ವೇಳೆಯಲ್ಲಿ ಜೀವನವೇ ಕಂದರ.
ಮರೆತು ನೂಕುವ ಕಾಲವೇ ಹೇಳು.
ಬದುಕು ಒಂದು ನೀರಡಿಕೆಯ ಗೋಳು.
ನೋವುಗಳು ಬದುಕು ಸುಟ್ಟು.
ಬರಡು ಜೀವನವ ಹಾಗೆ ಬಿಟ್ಟು.
ಕಣ್ಣೀರ ಹನಿಯು ಕಥೆ ಹೇಳಿದೆ.
ಗರಿಕೆಯ ತಾಗಿ ಕಣ್ಣೀರ ಇಬ್ಬನಿಯಾಗಿದೆ.
*********ರಚನೆ*********
ಡಾ. ಚಂದ್ರಶೇಖರ್ ಸಿ.ಎಚ್
Comments
Post a Comment