Posts

Showing posts from February, 2023

ಕಣ್ಣೀರ ಇಬ್ಬನಿ

Image
  ಕಣ್ಣೀರ ಹನಿಗೆ ಕಂಬನಿಯ ಮುಕ್ತಿ. ನರನಾಡಿಗಳಲ್ಲಿ ಹರಿವ ರಕ್ತವೇ ಶಕ್ತಿ. ವಯಸ್ಸು ಉಕ್ಕುವಾಗ ಆಸೆಗಳು ನೂರು. ಮುದುಡಿದ ಮನಸ್ಸಿಗೆ ನೆರಿಗೆಯೆ ತೇರು. ಯೌವ್ವನದ ಹೊಳೆಯಲ್ಲಿ ಈಜು ಸುಂದರ. ಮುಪ್ಪಿನ ವೇಳೆಯಲ್ಲಿ ಜೀವನವೇ ಕಂದರ. ಮರೆತು ನೂಕುವ ಕಾಲವೇ ಹೇಳು. ಬದುಕು ಒಂದು ನೀರಡಿಕೆಯ ಗೋಳು. ನೋವುಗಳು ಬದುಕು ಸುಟ್ಟು. ಬರಡು ಜೀವನವ ಹಾಗೆ ಬಿಟ್ಟು. ಕಣ್ಣೀರ ಹನಿಯು ಕಥೆ ಹೇಳಿದೆ. ಗರಿಕೆಯ ತಾಗಿ ಕಣ್ಣೀರ ಇಬ್ಬನಿಯಾಗಿದೆ. *********ರಚನೆ********* ಡಾ. ಚಂದ್ರಶೇಖರ್ ಸಿ.ಎಚ್

ಮನದ ಮಳೆ ಹನಿ

Image
  ಕಣ್ಣ ಹನಿಯಾಗಿತು ಕಂಬನಿ ಒಲವು ಹಿತವಾಯಿತು ತಬ್ಬಿ ನೀ ಬದುಕು ಹಸಿರಾಯ್ತು ಇರಲು ನೀ ಪ್ರೀತಿಯ ಹೆಸರಾಯಿತು ಕೇಳಿ ನಿನ್ನ ಧ್ವನಿ ಕನಸು ಕರಗಿ ಹೋಯಿತು ಕಾಣದೆ ನೀ ಕೆರಳಿದ ಭಾವನೆಗಳ ಬಿಸಿ ನೀರು ನೀ ಮಾಗಿದ ಬಯಕೆಗಳ ಬಣ್ಣ ನೀ  ಬೆವರ ಹನಿಯಲ್ಲಿ ಕರಗಿದ ಬದುಕು ನೀ ಉಸಿರು ನಿಂತೋಗುವುದೇ ಇಲ್ಲದೆ ನೀ. ಅರಳಿದ ಹೂವಿನ ಲತೆಯಂತೆ ನೀ ಮನದ ಆಸೆಗಳ ಮಳೆ ಹನಿ                ಸಮರ್ಪಣೆ ************ರಚನೆ******** ಡಾ. ಚಂದ್ರಶೇಖರ ಸಿ ಎಚ್

ನೀನಿಲ್ಲದೆ ಹೃದಯ ಅಳುತಿದೆ

Image
ಆಕಾಶದಿ ಮಿನುಗುವ ತಾರೆ ನಿನ್ನನೇ ಹುಡುಕಿದೆ ಬಾಳಲ್ಲಿ ಬಾರೆ ನೀನಿಲ್ಲದ ಈ ಜೀವದಿ ಹೃದಯ ಅಳುತಿದೆ ನನ್ನ ಕಾಡಿದ ಮಾಯೆಯೇ ಮನಸು ಬೇಡಿದ ಚಾಯೆಯೆ  ನೀನಿಲ್ಲದ ಈ ಜೀವಕೆ ಹೃದಯ ಅಳುತಿದೆ ನೀನಿಲ್ಲದ ಕ್ಷಣ ನನ್ನ ಕಾಡಿದೆ ಅನುದಿನವೂ ನೀನು ಬೇಕಿದೆ ಈ ಬದುಕಲಿ ನಿನ್ನ ಬೇಡಿದೆ ನೀನೆ ನನ್ನ ಪ್ರೀತಿ ಎಂದಿದೆ  ನೀನಿಲ್ಲದ ಈ ಜೀವಕೆ ಹೃದಯ ಅಳುತಿದೆ ಈ ಮನಸ್ಸು ನಿನ್ನದೇ ಈ ಕನಸ್ಸು ನಿನ್ನದೆ ನಾನು ನಿನ್ನವನೇ, ನಿನಗಾಗಿಯೇ ಕಾದಿರುವೆ ನೀನಿಲ್ಲದ ಕ್ಷಣವು ನನ್ನ ಕಾಡಿದೆ  ನೀನೆ ನನ್ನ ಬದುಕು ಎಂದಿದೆ ಬಾನ ಹಂಚಲಿ ತೇಲಿ ನಾನು ಹುಡುಕಿದೆ ನಿನ್ನ ಭೂಮಿ ಬಾನು ಪ್ರತಿಕ್ಷಣವೂ ನೀನು ಬೇಕಿದೆ ತೆಲೋಣ ನಾವು ನೀಲಿ ಬಾನಲಿ  ನಮ್ಮ ಮಿಲನವೇ ಹಕ್ಕಿಗಳ ಚಿಲಿಪಿಲಿ ನೀನಿಲ್ಲದ ಈ ಜೀವದಿ ಹೃದಯ ಆಳುತಿದೆ ನೀನ ಇರುವ ಪ್ರತಿಕ್ಷಣವೂ ಜೀವನ ನಗುತಿದೆ  ನೀನಿಲ್ಲದೆ ಹೃದಯವು ಬಡಿತ ಮರೆತಿದೆ ನನ್ನೇ ನಾ ಅರ್ಪಿಸುವೆ ನಿನ್ನ ಪ್ರೀತಿಗೆ ನನ್ನೇ ನಾ ಕೊಡುವೆ ಆ ನಿನ್ನ ಬದುಕಿಗೆ ನಾ ಬರುವೆ ನಿನ್ನ ಬಾಳಿಗೆ ತಲುಪುವ ದಾರಿ ಕಾಯದೆ ಪ್ರತಿಕ್ಷಣವೂ ನಿನ್ನ ನೆನಪು ಕಾಡಿದೆ ನೀನಿಲ್ಲದ ಬದುಕು ಬರಡು  ಈ ಪ್ರೀತಿಯಲ್ಲಿ ನಾನು ಕುರುಡು  ನೀನಿಲ್ಲದ ಈ ಜೀವದಿ ಹೃದಯ ಆಳುತಿದೆ **********ರಚನೆ******** ಡಾ. ಚಂದ್ರಶೇಖರ್. ಸಿ. ಏಚ್ 

ನಿನದೇ ನೆನಪು ಕಣೆ

Image
  ನೀ ಬಾನಿನ ಚುಕ್ಕಿ  ನಾ ಹಾರುವ ಹಕ್ಕೀ ನನ್ನೆದೆ ಗೂಡಲಿ ನಿನ್ನದೇ ನೆನಪು ಕಣೆ ನನ್ನ ಕಾಡುವ ದೇವತೆ ಮನಸು ಬೇಡಿದ ಶಾಂತತೆ ನನ್ನೆದೆ ಗೂಡಲ್ಲಿ ನಿನ್ನದೇ ನೆನಪು ಕಣೆ ಕಣ್ಣ ಹನಿಯು ನನ್ನೇ ಕಾಡಿದೆ ನನ್ನ ಉಸಿರು ನಿನ್ನೆ ಬೇಡಿದೆ ಬದುಕಲಿ ಬಂದ ಪ್ರೀತಿಯ ಕಾಂತಿ ನೀನೆ ನನ್ನ ಬಾಳ ಸಂಗಾತಿ ನನ್ನೆದೆ ಗೂಡಲಿ ನಿನದೇ ನೆನಪು ಕಣೆ ಈ ಉಸಿರು ನಿನ್ನದೇ ಈ ಪ್ರಾಣ ನಿನ್ನದೇ ನಿನ್ನೆ ಬೇಡಿದೆ ನಿನಗಾಗಿಯೇ ಕಾದಿದೆ ಪ್ರತಿಕ್ಷಣ ನನ್ನ ಕಾಡಿದೆ ನೀನೇ ಜೀವ ಎಂದಿದೆ ತಿರುಗು ಭೂಮಿಯಲ್ಲಿ ಹುಡುಕಿದೆ ನಿನ್ನ ನಾನು ಹಕ್ಕಿಯಂತೆ ಬಾನಲ್ಲಿ ಹರೋಣವೇನು ಮೋಡದಿ ಮಳೆಗೆ ಕನಸು ಬಂದಿದೆ ಕನಸಿಗೆ ಏಕೋ ಮನಸು ಕುಣಿದಿದೆ ನನ್ನದೇ ಗೂಡಲಿ ನಿನದೇ ನೆನಪು ಕಣೆ ನೀನಿರುವ ಕ್ಷಣ ಜೀವ ಹೂವಂತೆ ಅರಳಿದೆ ನೀನಿಲ್ಲದ ಈ ಹೃದಯ ಬಡಿತ ಮರತಿದೆ ನನ್ನೇ ನಾ ಕೊಡುವೆ ನಿನ್ನ ಪ್ರೀತಿಗೆ ಬಾರೆ ನೀನು ನನ್ನ ಬಾಳಿಗೆ ನೀನು ಕಾಡುವ ಮಲ್ಲಿಗೆ ಪ್ರೀತಿ ಸುಂದರ ಹೂ ನಗೆ ಈ ಬಾಳು ಒಂದು ಒಂಟಿ ಪಯಣ ಈ ಪಯಣ ಒಂದು ಸುಂದರ ಕವನ ಪ್ರತಿಕ್ಷಣವೂ ನಿನ್ನ ಕವನ ಕಾಡಿದೆ ಈ ಬಾಳು ಗೋಳಿನ ಸಂತೆ ನನ್ನ ಪ್ರೀತಿಗೆ ನಿನ್ನ ಚಿಂತೆ ನನ್ನದೇ ಗೂಡಲಿ ನಿನದೇ ನೆನಪು ಕಣೆ *********ರಚನೆ******* ಚಂದ್ರಶೇಖರ್ ಸಿ ಎಚ್