ನಿನದೇ ನೆನಪು ಕಣೆ

 



ನೀ ಬಾನಿನ ಚುಕ್ಕಿ 

ನಾ ಹಾರುವ ಹಕ್ಕೀ

ನನ್ನೆದೆ ಗೂಡಲಿ ನಿನ್ನದೇ ನೆನಪು ಕಣೆ


ನನ್ನ ಕಾಡುವ ದೇವತೆ

ಮನಸು ಬೇಡಿದ ಶಾಂತತೆ

ನನ್ನೆದೆ ಗೂಡಲ್ಲಿ ನಿನ್ನದೇ ನೆನಪು ಕಣೆ


ಕಣ್ಣ ಹನಿಯು ನನ್ನೇ ಕಾಡಿದೆ

ನನ್ನ ಉಸಿರು ನಿನ್ನೆ ಬೇಡಿದೆ

ಬದುಕಲಿ ಬಂದ ಪ್ರೀತಿಯ ಕಾಂತಿ

ನೀನೆ ನನ್ನ ಬಾಳ ಸಂಗಾತಿ

ನನ್ನೆದೆ ಗೂಡಲಿ ನಿನದೇ ನೆನಪು ಕಣೆ


ಈ ಉಸಿರು ನಿನ್ನದೇ ಈ ಪ್ರಾಣ ನಿನ್ನದೇ

ನಿನ್ನೆ ಬೇಡಿದೆ ನಿನಗಾಗಿಯೇ ಕಾದಿದೆ

ಪ್ರತಿಕ್ಷಣ ನನ್ನ ಕಾಡಿದೆ

ನೀನೇ ಜೀವ ಎಂದಿದೆ



ತಿರುಗು ಭೂಮಿಯಲ್ಲಿ ಹುಡುಕಿದೆ ನಿನ್ನ ನಾನು

ಹಕ್ಕಿಯಂತೆ ಬಾನಲ್ಲಿ ಹರೋಣವೇನು

ಮೋಡದಿ ಮಳೆಗೆ ಕನಸು ಬಂದಿದೆ

ಕನಸಿಗೆ ಏಕೋ ಮನಸು ಕುಣಿದಿದೆ

ನನ್ನದೇ ಗೂಡಲಿ ನಿನದೇ ನೆನಪು ಕಣೆ


ನೀನಿರುವ ಕ್ಷಣ ಜೀವ ಹೂವಂತೆ ಅರಳಿದೆ

ನೀನಿಲ್ಲದ ಈ ಹೃದಯ ಬಡಿತ ಮರತಿದೆ


ನನ್ನೇ ನಾ ಕೊಡುವೆ ನಿನ್ನ ಪ್ರೀತಿಗೆ

ಬಾರೆ ನೀನು ನನ್ನ ಬಾಳಿಗೆ

ನೀನು ಕಾಡುವ ಮಲ್ಲಿಗೆ

ಪ್ರೀತಿ ಸುಂದರ ಹೂ ನಗೆ

ಈ ಬಾಳು ಒಂದು ಒಂಟಿ ಪಯಣ

ಈ ಪಯಣ ಒಂದು ಸುಂದರ ಕವನ

ಪ್ರತಿಕ್ಷಣವೂ ನಿನ್ನ ಕವನ ಕಾಡಿದೆ


ಈ ಬಾಳು ಗೋಳಿನ ಸಂತೆ

ನನ್ನ ಪ್ರೀತಿಗೆ ನಿನ್ನ ಚಿಂತೆ

ನನ್ನದೇ ಗೂಡಲಿ ನಿನದೇ ನೆನಪು ಕಣೆ


*********ರಚನೆ*******

ಚಂದ್ರಶೇಖರ್ ಸಿ ಎಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35