ಕಡಲ ತೀರ
ಸಮುದ್ರದ ದಡದಿ ಕೂತಿಹಳು ಹುಡುಗಿ
ನೀರಿನ ಅಲೆಯ ಹೊಡೆತ ನೋಡುತ ಬೆಡಗಿ
ಕಣ್ಮುಂದೆ ಬಂತು ಒಂದು ಕನಸು
ಕಳೆದು ಹೋದ ಪ್ರೀತಿಯ ಹುಡುಗನ ನನಸು
ದೂರದಿ ದೋಣಿಯಲಿ ಕೈ ಬಿಸಿ ಕರೆದಂತೆ
ನೆನಪಿನ ಆ ಘಳಿಗೆ ಕ್ಷಣದಲ್ಲಿ ಮರೆತಂತೆ
ನಿನ್ನಯ ನೆನಪು ಎಷ್ಟು ಸುಂದರ
ಅಲೆಗಳನ್ನು ಬಾಚಿ ತಬ್ಬಿದಷ್ಟು ಮಧುರ
ಮರೆತ ಮನಸು ಸೆಳೆಯಿತು ಏಕೋ
ಕಂಡ ಕನಸು ಮತೊಮ್ಮೆ ನನಗೆ ಬೇಕು
ನಿ ಕೊಟ್ಟ ನೆನಪು ಮತ್ತೆ ಕಾಡಿದೆ
ಮನಸು ತಾನೇ ನಿನ್ನ ಒಲವ ಬೇಡಿದೆ
ಬಾ ಬೇಗ ಹುಡುಗ ತೋರು ನಿನ್ನ ನಗುವ
ಕಾಣದೆ ಕಾಯುತಿದೆ ಈ ಮನ ಕೂತು ದಡವ
ಅಪ್ಪಳಿಸಿದ ಅಲೆಯು ಮನಸನ್ನು ಕೊಂದು
ಹಿಂದೆ ಸರಿಯಿತು ಅಲೆಯು ಕನಸನ್ನು ತಿಂದು
ನಿ ಇರದೇ ಜೀವನವೇ ಬಲು ಒಂಟಿ
ಬದುಕು ನಡೆಯುತ್ತಿದೆ ದಾರಿಯಲ್ಲಿ ಕುಂಟಿ
ಕಡಲತೀರದಲ್ಲಿ ನಿನಗಾಗಿ ಬಂದು ಕುಂತೆ
ಮನಸ್ಸಲ್ಲಿ ನಿನ್ನ ನೆನಪಿನ ಸಾವಿರ ಚಿಂತೆ
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment