ಬಂಧನ
ಮದುವೆ ಎಂಬ ಮುದ್ದಾದ ಸರಪಳಿ
ಇಬ್ಬರನು ಬಂಧಿಸಿತು ಮನದಲಿ
ಪ್ರೀತಿಯಲಿ ಹೃದಯ ಬೆಸೆದು
ಒಲವಿನ ಕದವ ತೆರೆದು ಬಾಳಿ
ಬದುಕಲಿ ನೂರ ದಿನ
ಕಲೆತು ಮೌನದಿ ತನು ಮನ
ಮಾತಿನ ಬುಗ್ಗೆ ಜೀವನದಿ ಚಿಮ್ಮಿ
ಒಲವಿನ ಬೆಸುಗೆ ನಡೆಯಲಿ ಒಮ್ಮಿ
ಕಲೆತು ಬೇರೆತ ಮಧುರ ಬಂಧನ
ಮನೆಯ ದೀಪ ಬೆಳಗಿ ಚಂದನ
ನೋವು ನಲಿವಿನ ಸರಪಳಿ
ಜೀವನದಿ ಬದುಕ ಕಟ್ಟಲಿ
ಮನಸು ಮನಸುಗಳ ಬೆಸುಗೆ
ಬಣ್ಣದ ಕನಸಿನ ಹೊಸ ಬಗೆ
ಮನದ ಮಿಡಿತ ನಿನ್ನ ಕಂಡು
ಬಂಧನದಲ್ಲಿ ಸುಕುವ ಉಂಡು
ಹೃದಯದಲ್ಲಿ ಏನೋ ಹೊಸತನ
ಕಾಣದ ಮನಸ್ಸಿನ ಚೇತನ
*********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment