ಒಲವಿನ ಬಣ್ಣ
ಬದಲಾಗೋ ಬಣ್ಣಕೆ ನಾ ಏನು ಹೇಳಲಿ
ಮಿಂಚೋಗೋ ಬೆಳಕಿಗೆ ನಾ ಏನ್ ಅನ್ನಲಿ
ಕಳೆದೋಗೋ ವಯಸ್ಸನ್ನು ನಾ ಹೇಗೆ ತಡೆಯಲಿ
ಮುರಿಡೊದ ಮನಸ್ಸನು ನಾ ಹೇಗೆ ಕೂಡಿಸಲಿ
ಬೇರೆತೋದ ಹೃದಯದ ಬಣ್ಣವೇ ಬರೆ
ಕಲೆತೋದ ಮನಸ್ಸನು ಪ್ರೀತಿಸು ಮನಸಾರೆ
ಒಡಲಾಳದಲ್ಲಿ ಹುಟ್ಟಿದ ಬೆಂಕಿ ನಾ ಅರಿಸಲಾರೆ
ನೊಂದ ಜೀವದ ನೋವನು ನಾ ಸಹಿಸಲಾರೆ
ಮರೆತ್ತೊಗೋ ಮಾತಿಗೆ ಗೆಜ್ಜೆ ಕಟ್ಟಲಾರೆ
ಬಣ್ಣದ ಚೆಲುವು ಎಂದು ಬದುಕು ಕಟ್ಟದು
ಬಯಸದ ಒಲವು ಎಂದು ಮನವ ಮುಟ್ಟದು
ಪ್ರೀತಿಯ ಮನವು ನೋವಿನಲಿ ಕದವ ತಟ್ಟದು
ಮನಸು ಮನಸು ಬೇರೆಯೋ ಮಧುರ ಹುಟ್ಟಿದು
ಕನಸು ಕನಸುಗಳ ನಡುವೆ ಏಕೋ ಮೋಹ
ಮನಸು ಒಲವಿನ ನಡುವೆ ಪ್ರೀತಿ ದಾಹ
ಬೇರುತು ಕಲೆಯುವ ನಡುವೆ ಏಕೋ ಪ್ರವಾಹ
ತಿಳಿಯದೆ ಆಯಿತು ಕೊನೆಗೆ ನೋವಿನ ದ್ರೋಹ
**********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment