ಮಿನುಗು ತಾರೆ
ನನ್ನಾಸೆ ದ್ರುವತಾರೆ
ನೀ ಬೇಗ ಬಳಿ ಬಾರೆ
ಕಾದಿಹೆನು ಮನಸಾರೆ
ಒಮ್ಮೆ ಮೊಗವತೋರೆ
ನಿನ ನೋಟ ಬಲು ಚೆಂದ
ಗಗನದಿಂದ ಧರೆಗೆ ಬಂದ
ಕಮಲ ಕುಸುಮವೇ ಅಂದ
ನನಗಾಗಿ ದೇವರು ತಂದ
ಪ್ರೀತಿಯಲಿ ಬಲು ಸರಸ
ಕಾಯುತಿದೆ ಈ ವಿರಹ
ನಿ ನನ್ನ ಮುದ್ದು ಬರಹ
ಒಲವಿಂದ ಬಾ ಸನಿಹ
ಮಾತಿನಲ್ಲಿ ಬಲು ಜೋರು
ನಗೆ ತುಂಬಾ ಹಾಲು ಕೀರು
ನೀ ಇಲ್ಲದೆ ಜೀವನ ಬೋರು
ಬಳಿ ಬಾರೆ ಪ್ರೀತಿ ಪಾರು
ಮುದ್ದಾಗಿ ನಿ ಬಾರೆ
ನನ್ನ ಒಲವ ತಾರೆ
ಪ್ರೀತಿಸುವೆನು ಮನಸಾರೆ
ಒಮ್ಮೆ ಕರುಣೆ ತೊರೆ
ನನ್ನಾಣೆ ನಿ ಚೆಂದ ನಗುವಿನಲಿ ಅಂದ
ಬಾ ಬಾರೆ ಒಲವೇ ನಿ ಇದ್ದರೆ ಬಲವೇ
***********ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment