ಕನಕದಾಸ ಪದ

 



ಕುಲ ಕುಲವೆಂದು ಕುಣಿದಾಡುವರು

ಹೆಣ್ಣಿನ ಮೋಹಕೆ ಬಲಿಯಾಗುವರು

ನೆಲ ಜಲಕಾಗಿ ಕೀರುಚಾಡಿಹರು 

ಜಾತಿ ಮತಕೆ ಬಡಿದಾಡುವರು 


ಹೆಣ್ಣು ಮಾಯೆಯೋ ಹೊನ್ನು ಮಾಯೆಯೋ

ನೀ ಮಾಯೆಯೋ ನಿನ್ನಲೋಳಗಿರುವ ಆತ್ಮ ಮಾಯೆಯೋ

ಹುಟ್ಟುವಾಗ ತರಲಿಲ್ಲ ಸತ್ತಾಗ ವಯ್ಯಲಿಲ್ಲ 

ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ


ಬಡಿದಡಬೇಡವೋ ಮನುಸ

ಬದುಕಿನ ಛಾಯೆ ಮೂರೇ ದಿವಸ 

ನರಹರಿಯ ಕೂಗಿದರು  ಬಾಗಿಲನು ತೆರೆದು ಸೇವೆಗೆ

ಚಂದ್ರನನೇ ಮುರಿದ ಮೂರ ಕಣ್ಣ ಶಿವನು

ನೀನ್ಯಾವಲೆಕ್ಕ ಏಳಲೇ ಮನುಜ


ಖಂಡ ತುಂಡು ತಿಂದು ಅಂಗಡಿ ಮುಂಗಟ್ಟಿನಲ್ಲೂ ವ್ಯಂಗ್ಯ

ಗುಟ್ಟು ಹಿರಿದೇನು ಕಿರೀದೇನು ಸರ್ವಜ್ಞನ ನೆನೆಸು

ದೇವರಿಲ್ಲದ ಗುಡಿ ಬಾವವಿಲ್ಲದ ಬಕುತಿ

ಧರ್ಮವಿಲ್ಲದ ಅರಸು ಒಕ್ಕಲಿಲ್ಲದ ಊರು

ಸೋಕ್ಕಿ ನಡೆವ ಮನುಷ್ಯ ಅವ ಕ್ರೂರ ಕೃತ್ಯ

ಇದುವೇ ಈ ಯುಗದಿ ನಡೆವ ಘೋರ ಸತ್ಯ 


ಎಲ್ಲಾ ನನ್ನ ಮಿತ್ರರಿಗೂ ಕನಕ ಜಯಂತಿಯ ಶುಭಾಶಯಗಳು


,****-*****ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35