ಕಾಣದ ಕತ್ತಲೆ




 ಶಿಲ್ಪ  ಮುರಿದ ಮೇಲೆ

ನೋಡಲೆನಿದೆ ಶಿಲ್ಪದ ಕಲೆ

ಉಸಿರು ನಿಂತಮೇಲೆ

ಹೆಸರಿಗೇನಿದೆ ಬೆಲೆ


ಬೆಂಕಿಯಲಿ ಬೆಂದ ಓಲೆ

ಸುಡುತಿದೆ ಪಾತ್ರೆ ಇತ್ತಾಳೆ

ಅನ್ನದ ಋಣದ ಮೇಲೆ

ತಿನ್ನುವವನ ಹೆಸರು ಬರೆಯಲೇ


ಪ್ರೀತಿ ಹೋದ ಮೇಲೆ

ಕಂಡ ಕನಸಿನ ಕೊಲೆ

ಕಾಣುವಳೇ ನನ್ನವಳು ನೆಲೆ

ಹರಿವ ನದಿಯಂತೆ ಅವಳ ಸೆಲೆ


ಜೇಡ ಎಣೆದ ಬಲೆ

ತನ್ನನೇ ಸುತ್ತಿ ಸಾಯಲೇ

ಬದುಕು ಕೇಳಿದೆ ನೀ ಅಬಲೆ

ಯಾರಿಟ್ಟರು ವಿಧಿ ಬರಹ ಒಮ್ಮೆ ನೋಡಿ ಏಳಲೇ


ಹಗಲು ಮುಗಿದ ಮೇಲೆ

ಇರುಳೊಂದು ಕತ್ತಲೆ

ಹೂವೊಂದು ನಗುತಿದೆ ನೋಡಿ ಇತ್ತಲೆ

ಕೊನೆಯಗಲಿದೆ ನನ್ನ ಬದುಕು ಸಾವಲೆ


ಎಲೆ ಉದುರಿದ ಮೇಲೆ

ಎಲೆ ಬದುಕು ತರಗೇಲೇ

ಯಾರಿಗೆ ಬೇಕು ಜೀವನ ಏಳಲೇ

ಮನುಜ ನಿನ್ನ ಹುಟ್ಟು ಸಾವು ಕೂಡ ಬೆತ್ತಲೆ


********ರಚನೆ ***********

ಡಾ. ಚಂದ್ರಶೇಖರ ಸಿ. ಹೆಚ್ 

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20