ಸೋತ ಒಲವು
ಯಾಕೆ ನೀ ದೂರದೇ
ಮನದಿಂದ ಬೆರಾದೆ
ಬದುಕಲ್ಲಿ ಚೂರದೆ
ಒಲವಲ್ಲಿ ಸೊತೊದೆ
ಪ್ರೀತಿಯ ಬೋರು
ದೇವರಿಲ್ಲದ ತೇರು
ಸೋರುವ ಸೂರು
ಕೇಳೋರು ಯಾರು
ಪ್ರೀತಿಯ ಪಯಣ
ನೋವಿನ್ನ ತಲ್ಲಣ
ಕೂಡದು ಕಂಕಣ
ಆಸೆಯೇ ಮಸಣ
ಬದುಕು ಬರಿದು
ನೀ ದೂರ ಸರಿದು
ಒಲವೇ ಹರಿದು
ಮನಸೇ ಮುರಿದು
ಸೇರುವುದೆಲ್ಲಿಗೆ
ಓ ನನ್ನ ಮಲ್ಲಿಗೆ
ಬಾ ನೀನು ಬಳಿಗೆ
ಓ ಕೆಂಡ ಸಂಪಿಗೆ
********ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment