ನಗುವ ನಯನ
ನಿನ್ನ ನಯನದ ಸುಳಿವು ನೀಡಿತು ಸೂಚಿನೆ
ನೀ ನನ್ನವಳೆಂದು ಕಾಡಿತು ನನ್ನನೇ
ಮನಸ್ಸು ಯಾಕೋ ಬೇಡಿತು ಸುಮ್ಮನೆ
ನಾನೇಗೆ ಮರೆಯಲಿ ನಿನ್ನನೇ
ಹೃದಯಕೆ ಅಪ್ಪುವ ಅಸೆ
ನನ್ನ ಒಲವ ಪ್ರೀತಿ ಕನಸೇ
ನನಗಾಗಿ ಹುಟ್ಟಿದ ಸೊಗಸೆ
ತನುವ ಪ್ರೀತಿ ನಿನ್ನನು ಬಯಸೆ
ಬಾನಂಗಳಾದ ಚುಕ್ಕಿ ನೀನು
ಪ್ರೀತಿಯ ಹಾಲಾಜೇನು
ನಿನಗಾಗಿ ಕಾದಿರುವೆ ನಾನು
ಮತ್ತೊಮ್ಮೆ ನಗಲಾರೆಯೇನು
ಕೆರಳಿದ ಕನಸ ಬಡಿದೇಬಿಸ್ಸಿ
ಮನದ ನೋವ ಮರೆಯಾಗಿಸಿ
ಪ್ರೀತಿ ಮಳೆಯಲಿ ತೋಯಿಸಿ
ಒಲವ ಬೆಸುಗೆಯಾಲಿ ಮಾಗಿಸಿ
ಬದುಕು ಕಟ್ಟೋಣ ಬಾ
ಪ್ರೀತಿ ಹಂಚೋಣ ಬಾ
ಕನಸ ಬಾಗಿಲ ತೆರೆದು ಬಾ
ನನ್ನಾಣೆ ನೀನೇ ನನ್ನ ಗೆಲುವು ಬಾ
***********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment