ನಿನ್ನಿಂದಲೇ
ನಿನ್ನ ನಗುವ ಕಂಡ ಮನವು ಹೇಳಿತು ನಿನ್ನಿಂದಲೇ
ಒಲವ ಇತವ ಕಂಡ ತನುವು ಹೇಳಿತು ನಿನ್ನಿಂದಲೇ
ಬಯಕೆ ನೂರು ಕರೆದು ಕೂಗಿತು ನಿನಗಾಗಿಯೇ
ಬಣ್ಣದ ಕಥೆ ಹೇಳಿದೆ ಜೀವನ ನಿನಗಾಗಿಯೇ
ಸೋತವರುoಟೆ ಜೀವನದಿ
ಬದುಕು ಎಂಬುದು ಬಾನಿನ ತುದಿ
ಹೃದಯ ಬೆಂದಿದೆ ಬಾನಂಗಳದಿ
ಪ್ರೀತಿ ಸಾರಿದೆ ನೀಲಿ ಆಕಾಶದಿ
ಚಂದ್ರನೊಬ್ಬ ಕರಗುತಿಹನು
ಸೂರ್ಯನೊಬ್ಬ ಊರಿಯುತಿಹನು
ನಕ್ಷತ್ರ ಚುಕ್ಕಿ ಬಾನಿನಲ್ಲಿ ಮಿನುಗುತಿಹವು
ಯಾರಿಗಾಗಿ ಈ ಮರಣ ನಾಲ್ಕು ದಿನದ ಈ ಪಯಣ
ಪ್ರೀತಿ ಸತ್ತು ಹುಟ್ಟುತಿಹುದು
ಭೂಮಿ ಏಕೋ ತಿರುಗುತಿಹುದು
ಮನವು ನೊಂದು ಮರುಗಿತಿಹುದು
ನೆನಪು ಯಾಕೋ ಸಾಯುತಿಹುದು
ಹುಟ್ಟು ಏಕೋ ಸಾಕು ಏನಿಸುತಿಹಾದು ನಿನ್ನಿಂದಲೇ
*********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment