ನೋವಿನ ತೀರ
ಮನಸು ಏಕೋ ಭಾರ
ಕನಸು ತೀರ ದೂರ
ಬದುಕು ಬಲು ನೇರ
ಬಾಳು ತಿಳಿದರೆ ಸಾರ
ಕನಸಿನ ಅರಮನೆ ಕೊಂದು
ಮನಸಿನ ಸೆರೆಮನೆ ಬೆಂದು
ನೋವು ಜೀವನವ ತಿಂದು
ಖುಷಿಯೇ ಕಾಣೆಯಾಗಿದೆ ಇಂದು
ಪಯಣ ತಂದಿದೆ ಬೇಸರ
ಜೋಡಿ ಇಲ್ಲದ ಸಂಸಾರ
ಒಲವು ತಂದಿದೆ ಸಂಚಾಕರ
ಪ್ರೀತಿ ನೆಮ್ಮದಿಯ ಸಂಹಾರ
ಏನು ಬೇಡಲಿ ನಾ ದೇವರಲ್ಲಿ
ಮೋಸವಾಯಿತೇ ಪ್ರೀತಿಯಲಿ
ಕಾಲ ಹೋಯಿತು ಕಣ್ಮರೆಯಲಿ
ಗಟಿಸಿದ ಘಟನೆಗಳ ನೆನಪಿನಲಿ
ಕಾಣದಾಯಿತು ಸೌಂದರ್ಯ
ತೋರಲಿಲ್ಲ ನೀ ಔದರ್ಯ
ಮನಸು ಮರುಗಿತು ಕಥೆ ಕೇಳಿ
ಕಾಲ ಹೊರಟಿತು ಕುಂಟು ನೆಪ ಹೇಳಿ
************ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment