ಭರವಸೆ
ಭರವಸೆ ಇಲ್ಲದ ಬದುಕು
ಕಬ್ಬಿಣದ ತುಕ್ಕಿನ ಸರಕು
ಕಿರಣವಿಲ್ಲದ ಕತ್ತಲೇ ಮನೆ
ಕಾಣಾದಾಗಿದೆ ಕಣ್ಣು ಸುಮ್ಮನೆ
ಒಲವು ಒಂದೂ ಬಾವನೆ
ಮನಸ್ಸು ಕೂತಿದೆ ತಣ್ಣನೆ
ಕನಸು ಬಿಚ್ಚಿದ ಅರಮನೆ
ಕತ್ತಲು ಕಾಣದ ಸೆರೆಮನೆ
ಬರವಸೆ ಬಾರದು ಸುಮ್ಮನೆ
ಶ್ರಮದ ಕೆಲಸ ಕೇಳಿದೆ ನಿನ್ನನೇ
ಕಿಂಡಿಯ ಸಂದಿಯ ಕಿರಣ
ನೋಡು ಬೆಳಕಿನ ಆಭರಣ
ಮನಸು ಏಕೋ ಮಾಗಿದೆ
ಕನಸು ಬಾರದೆ ಹೋಗಿದೆ
ನೋವಿನ ತಕ್ಕಡಿ ತೂಗಿದೆ
ಗೆಲುವು ಏಕೋ ಸೋತಿದೆ
ನೆಮ್ಮದಿ ಹುಡುಕುತ ಹೊರಟೆ
ಸಿಗುವುದೇ ಹೊಡೆದರೆ ಅರಟೆ
ಸಾಗಿತು ಬದುಕಿನ ಪಯಣ
ಜೀವನ ಹುಡುಕುತ ಮರಣ
**********ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment