ಸಂಗಾತಿ

 



ಹೆಣ್ಣು ಎಂಬ ಮಾಯೆ

ಒಲವಿನ ನೋವಿನ ಛಾಯೆ

ಬದುಕಲಿ ಬಂದ ಸಂಗಾತಿ

ಕೊಟ್ಟಳು ನೋವಿನ ಪ್ರೀತಿ



ನೆನೆದರೆ ಪ್ರೀತಿಯ ಮುತ್ತು

ಇವಳು ನನ್ನಯ ಸ್ವತ್ತು

ಕರೆದೆರೆ ಬರಬೇಕಿತ್ತು

ಹೊರಟಳು ಮನವ ಕಿತ್ತು



ಸಂಗಾತಿ ಇಲ್ಲದ ಜೀವ

ತಾಳಿದೆ ಒಲವಿನ ನೋವ

ಕಾದಿದೆ ಪ್ರಣಯದ ಕಾವ

ತಿಂದಿದೆ ನೋವಿನ ಬೇವ


ಮಧುರ ಮಾತುಗಳ ನೆನಪು

ಮನಸಿನ ಹೊಸ ಹುರುಪು

ಕನಸುಗಳ ನಯ ಹೊಳಪು

ಸಂಗಾತಿ ನಿನಗೆ ಮುಡಿಪು


ಹೊಸಬೆಳಕು ಮಾಸಿದೆ

ಬದುಕು ಏಕೋ ರೋಸಿದೆ

ಸಂಗಾತಿ ಎಂಬ ಮಾಯೆ

ಪ್ರೀತಿ ನೋವಿನ ಛಾಯೆ



**********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್


Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa